ಆನ್ಲೈನ್ ಮೂಲಕ ಹಾಗೂ ಜೆಸ್ಕಾಂನ ನಿಗಮ ಕಚೇರಿಯ ಸಭಾಂಗಣದಲ್ಲಿ ಆಫ್ಲೈನ್ ಮೂಲಕ ಭಾಗವಹಿಸಿದ ಗ್ರಾಹಕರು, ವಿದ್ಯುತ್ ದರ ಏರಿಕೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕೆಲವರು ದರ ಏರಿಕೆಯಿಂದ ಸಾಮಾನ್ಯ ಜನತೆ ಮತ್ತು ಸಣ್ಣ ಕೈಗಾರಿಕೆಗಳ ಮೇಲೆ ಆಗುವ ಆರ್ಥಿಕ ಭಾರ ಉಲ್ಲೆಖಿಸಿ, ಪರಿಷ್ಕರಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು. ಇನ್ನೂ ಕೆಲವರು ವಿದ್ಯುತ್ ಸರಬರಾಜಿನ ಗುಣಮಟ್ಟ, ವ್ಯತ್ಯಯ ಹಾಗೂ ಮೂಲಸೌಕರ್ಯ ಸಂಬಂಧಿತ ಸಮಸ್ಯೆಗಳ ಕುರಿತ ಪ್ರಶ್ನೆ ಮಾಡಿದರು.