ಈಗಾಗಲೇ ನಿರ್ಮಾಣ ಮಾಡುತ್ತಿರುವ ತರಕಾರಿ ಮಾರಾಟ ಮಳಿಗೆಗಳ ನೀಲಿ ನೆ ಹಾಗೂ ವಾಸ್ತವಿಕ ಅಂಗಡಿಗಳ ಸ್ಥಳ ಗಮನಿಸಿದ ಶಾಸಕ ತುನ್ನೂರ, ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೈಲಾಸ ಅನವಾರ, ಪ್ರಭಾಕರ, ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಶ್ವನಾಥ ಜತೆ ಚರ್ಚಿಸಿದರು. 71 ವ್ಯಾಪಾರ ಮಳಿಗೆಗಳನ್ನು ನಿರ್ಮಾಣವಾಗುತ್ತಿದ್ದು, ಅವು ಎಲ್ಲವೂ ಚಿಕ್ಕ, ಚಿಕ್ಕ ಮಳಿಗೆಗಳಾಗಿವೆ. ಇದರಿಂದ ಯಾರಿಗೂ ಉಪಯೋಗವಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಕಾಮಗಾರಿ ಕ್ರೀಯಾ ಯೋಜನೆ ತಯಾರಿಸುವಾಗ ಇಂಜಿನಿಯರಗಳು ವ್ಯಾಪಾರಸ್ಥರ ಸಲಹೆ&ಸೂಚನೆ ಪಡೆದು ಸಿದ್ದಪಡಿಸಬೇಕಿತ್ತು ಎಂದು ಅಸಮಧಾನ ವ್ಯಕ್ತಪಡಿಸಿದರು. ಈಗಾಗಲೇ ಬೇಸ್ಮೆಂಟ್ವರೆಗೆ ಕಾಮಗಾರಿ ಮುಗಿದಿದೆ, ಇನ್ನೂ ಅವಕಾಶವಿದೆ, ಮಾರ್ಪಾಡು ಮಾಡಲು ಮತ್ತೊಮ್ಮೆ ಎಲ್ಲರೂ ಕೂಡಿ, ಕೆಲವು ಅಂಗಡಿಗಳನ್ನು ದೊಡ್ಡದಾಗಿ ನಿರ್ಮಾಣ ಮಾಡಿ ಎಂದು ತಾಕೀತು ಮಾಡಿದರು.