ವೀರಭದ್ರೇಶ್ವರ ಜಾತ್ರೋತ್ಸವ ಇಂದಿನಿಂದ

ವೀರಭದ್ರೇಶ್ವರ
ವೀರಭದ್ರೇಶ್ವರ
Published on
ಬೈಲಹೊಂಗಲ: ತಾಲೂಕಿನ ಲಕ್ಕುಂಡಿ ಗ್ರಾಮದ ಗಾಳಿಮರಡಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಮೇ 4ರಿಂದ 8ರವರೆಗೆ ನಡೆಯಲಿದೆ. ಮೇ 4ರಂದು ಬೆಳಗ್ಗೆ 9ಕ್ಕೆ ಹಣಬರಹಟ್ಟಿಯ ಬಸವಲಿಂಗ ಶಿವಯೋಗಿ ಪಟ್ಟದೇವರು ಧರ್ಮ ಧ್ವಜಾರೋಹಣ ಹಾಗೂ ರಥದ ಕಳಶಾರೋಹಣ ನೆರವೇರಿಸಲಿದ್ದಾರೆ. ಮೇ 5ರಂದು ಗ್ರಾಮದೇವಿ ಹಾಗೂ ದುರ್ಗಾದೇವಿಗೆ ಮುತೈದೆಯರಿಂದ ಉಡಿ ತುಂಬುವುದು, ಮಧ್ಯಾಹ್ನ ಮಹಾಪ್ರಸಾದ ನೆರವೇರಲಿದೆ. ಮೇ 6ರಂದು ವೀರಭದ್ರೇಶ್ವರ ಮೂರ್ತಿಗೆ ರುದ್ರಾಭಿಷೇಕ, ವಿವಿಧ ದೇವರುಗಳಿಗೆ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ನಡೆಯಲಿದೆ. ಸಂಜೆ 4.30ಕ್ಕೆ ವೀರಭದ್ರೇಶ್ವರರ ಮಹಾರಥೋತ್ಸವ ಜರುಗಲಿದೆ. ರಾತ್ರಿ 10ಕ್ಕೆ ಮನರಂಜನೆ ಕಾರ್ಯಕ್ರಮ, ಮೇ 7ರಂದು ಬೆಳಗ್ಗೆ ವಿಶೇಷ ಪೂಜೆ, ಅಭಿಷೇಕ, ಮಧ್ಯಾಹ್ನ 4ಕ್ಕೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ, 7ಕ್ಕೆ ಶಾಲಾ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಲಿವೆ. ಮೇ 8ಕ್ಕೆ ವೀರಭದ್ರೇಶ್ವರ ತೇರಿನ ಕಳಶ ಇಳಿಸಲಾಗುವುದು. ಕಡಕೋಳದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಹಣಬರಹಟ್ಟಿಯ ಬಸವಲಿಂಗ ಪಟ್ಟದೇವರು, ನರಗುಂದದ ಸಿದ್ದವಿರ ಶಿವಯೋಗಿ, ತವಗದ ಶಿವಕುಮಾರ ಸ್ವಾಮೀಜಿ, ಮಲ್ಲಾಪುರದ ಚಿದಾನಂದ ಸ್ವಾಮೀಜಿ, ಯರಗೊಪ್ಪದ ನಿತ್ಯಾನಂದ ಸ್ವಾಮೀಜಿ ಆಗಮಿಸಲಿದ್ದಾರೆ ಎಂದು ವೀರಭದ್ರೇಶ್ವರ ಜಾತ್ರಾ ಉತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net