ಗುಳೆ ತಡೆಗೆ ವಿಬಿಜಿ ರಾಮ್​ ಜಿ ಉದ್ಯೋಗ

ಉಡಮನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕನಳ್ಳಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜಾಬ್​ ಕಾರ್ಡ್​ ಮೇಳಕ್ಕೆ ಸಂಸದ ಸಾಗರ ಈಶ್ವರ ಖಂಡ್ರೆ ಚಾಲನೆ ನೀಡಿ ಜಾಬ್​ ಕಾರ್ಡ್​ ವಿತರಿಸಿದರು. ಮಾಜಿ ಶಾಸಕ ಅಶೋಕ ಖೇಣಿ, ಜಿಪಂ ಉಪ ಕಾರ್ಯದರ್ಶಿ ಶರಣಬಸಪ್ಪ ಕೊಟ್ಯಪ್ಪಗೊಳ್​, ತಾಪಂ ಇಒ ಲಿಂಗರಾಜ ಪಾಟೀಲ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಸಾಗರ ಖಂಡ್ರೆ ಅಭಿಮತ
  • ಕರಕನಳ್ಳಿಯಲ್ಲಿ ಜಾಬ್​ ಕಾರ್ಡ್​ ವಿತರಣೆ
ಚಿಟಗುಪ್ಪ: ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಗುಳೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ ಕೆಲಸ ದೊರೆಯುವಂತೆ ಸರ್ಕಾರದ ವಿಬಿ&ಜಿ ರಾಮ್​ಜಿ ಯೋಜನೆಯ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಬೀದರ್​ ಸಂಸದ ಸಾಗರ ಖಂಡ್ರೆ ಹೇಳಿದರು.
ತಾಲೂಕಿನ ಉಡಮನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಾಬ್​ ಕಾರ್ಡ್​ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾಬ್​ ಕಾರ್ಡ್​ ಇಲ್ಲದ ಕುಟುಂಬಗಳು ಗ್ರಾಮ ಪಂಚಾಯಿತಿಯಲ್ಲಿ ವಿಬಿ&ಜಿ ರಾಮ್​ಜಿ ಯೋಜನೆಯಡಿ ದೊರೆಯುವ ಉದ್ಯೋಗ ಸೌಲಭ್ಯ ಬಳಸಿಕೊಳ್ಳಬೇಕು. ಗ್ರಾಮಗಳಲ್ಲಿರುವ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
10 ಕುಟುಂಬಗಳಿಗೆ ಹೊಸ ಜಾಬ್​ ಕಾರ್ಡ್​ಗಳನ್ನು ವಿತರಿಸಲಾಯಿತು. ಮಾಜಿ ಶಾಸಕ ಅಶೋಕ ಖೇಣಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶರಣಬಸಪ್ಪ ಕೆ., ತಾಪಂ ಇಒ ಅಧಿಕಾರಿ ಲಿಂಗರಾಜ ಪಾಟೀಲ, ತಾಂತ್ರಿಕ ಸಂಯೋಜಕ ಸುಧಾಕರ ಪಾಟೀಲ, ಐಇಸಿ ಸಂಯೋಜಕ ವಿಶ್ವನಾಥ, ತಾಂತ್ರಿಕ ಆದರ್ಶ ರಾಠೋಡ್​, ಬಿಎಫ್​ಟಿ ರಜನೀಕಾಂತ, ಕಾರ್ಯದರ್ಶಿ ರಾಮಚಂದ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net