ಗ್ರಾಮೀಣರಿಗೆ ವಿಬಿ-ಜಿ ರಾಮ್​ ಜಿ ವರದಾನ

ಔರಾದ್​ ತಾಲೂಕಿನ ಹೆಡಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್​ ಜಿ ಯೋಜನೆಯಡಿಯ  ಜಾಬ್​ ಕಾರ್ಡ್​ ಮೇಳಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಚಾಲನೆ ನೀಡಿದರು. ಶರಣಪ್ಪ ಗಾದಗೆ, ದತ್ತು ಭೋಸ್ಲೆ, ಅಂಬಾದಾಸ ಪಾಟೀಲ್​,  ರಜನೀಶ್​ ಇತರರಿದ್ದರು.
ಔರಾದ್​ ತಾಲೂಕಿನ ಹೆಡಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್​ ಜಿ ಯೋಜನೆಯಡಿಯ ಜಾಬ್​ ಕಾರ್ಡ್​ ಮೇಳಕ್ಕೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಚಾಲನೆ ನೀಡಿದರು. ಶರಣಪ್ಪ ಗಾದಗೆ, ದತ್ತು ಭೋಸ್ಲೆ, ಅಂಬಾದಾಸ ಪಾಟೀಲ್​, ರಜನೀಶ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಡಿ ಶಿವಕುಮಾರ ಘಾಟೆ ಅಭಿಮತ
  • ಹೆಡಗಾಪುರದಲ್ಲಿ ಜಾಬ್​ ಕಾರ್ಡ್​ ಮೇಳ
 ಔರಾದ್​:  ಗ್ರಾಮೀಣ ಪ್ರದೇಶದ ಅರ್ಹ ಕೂಲಿಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಜಾಬ್​ ಕಾರ್ಡ್​ ಮೇಳ ಆಯೋಜಿಸಲಾಗಿದ್ದು ಎಲ್ಲರೂ ಈ ಮೇಳದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಹೇಳಿದರು.
ತಾಲೂಕಿನ ಹೆಡಗಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-&ಜಿ ರಾಮ್​ ಜಿ ಯೋಜನೆಯಡಿಯ ಜಾಬ್​ ಕಾರ್ಡ್​ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೇಳದಲ್ಲಿ ಹೊಸದಾಗಿ ಜಾಬ್​ ಕಾರ್ಡ್​ ಪಡೆಯಲು ಅರ್ಜಿ ಸಲ್ಲಿಸುವುದು, ಈಗಾಗಲೇ ಇರುವ ಜಾಬ್​ ಕಾರ್ಡ್​ಗಳ ಪರಿಶೀಲಿಸಿ ಉದ್ಯೋಗದ ಬೇಡಿಕೆ ಸಲ್ಲಿಸುವ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. 
ವಿಬಿ-&ಜಿ ರಾಮ್​ ಜಿ ಯೋಜನೆಯಡಿ ಅನುಮತಿಸಲಾದ 318 ವಿವಿಧ ಕಾಮಗಾರಿಗಳಿದ್ದು,  ಯೋಜನೆಯಡಿ ದಿನಗೂಲಿ ರೂ.370ರಿಂದ ರೂ.382ಕ್ಕೆ ಹೆಚ್ಚಳ, ವಾರ್ಷಿಕ ಮಾನವ ದಿನಗಳ ಮಿತಿ 100ರಿಂದ 125 ದಿನಗಳಿಗೆ ಹೆಚ್ಚಳ, ಒಂದು ಗ್ರಾಮೀಣ ರೋಜ್​ಗಾರ ಗ್ಯಾರಂಟಿ ಕಾರ್ಡ್​ ಮೂಲಕ ವಾರ್ಷಿಕವಾಗಿ ರೂ.47,750ರವರೆಗೆ ಕೂಲಿ ಪಡೆಯುವ ಅವಕಾಶವಿದೆ ಎಂದು ಹೇಳಿದರು.
 ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ಗಾದಗೆ, ಡಿಇಒ ದತ್ತು ಭೋಸ್ಲೆ,  ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್​, ಕಾರ್ಯದರ್ಶಿ ರಜನೀಶ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net