ಬೆಳಗಾವಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಮತ್ತು ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿದ್ದ ಮಳೆಯ ಆರ್ಭಟ ಗುರುವಾರ ತಗ್ಗಿದ್ದರೂ, ನದಿ ನೀರಿನ ಆರ್ಭಟ ಮುಂದುವರಿದಿದೆ.
ಬುಧವಾರ ರಾತ್ರಿ ಧಾರಾಕಾರ ಸುರಿದ ಮಳೆಯಿಂದಾಗಿ ವೇದಗಂಗಾ, ದೂಧಗಂಗಾ ನದಿ, ರಾಜಾಪುರ ಬ್ಯಾರೆಜ್‌ನಿಂದ ಕೃಷ್ಣಾ ನದಿಗೆ 1.25 ಲಕ್ಷ ಕ್ಯೂಸೆಕ್, ಹಿಡಕಲ್ ಜಲಾಶಯಕ್ಕೆ 28,603 ಕ್ಯೂಸೆಕ್ ಹಾಗೂ ನವಿಲು ತೀರ್ಥ ಜಲಾಶಯಕ್ಕೆ 7,369 ಕ್ಯೂಸೆಕ್ ನೀರು ಹರಿದು ಬಂದಿದೆ.
ಜಲಾಶಯದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಗುರುವಾರ ಬೆಳಗ್ಗೆಯಿಂದ ಬಿಸಿಲು ಹಾಗೂ ಮೋಡ ಕವಿದ ವಾತಾವರಣವಿದೆ. ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳಲ್ಲಿ ನೀರಿನ ಹರಿವು ಮಟ್ಟ ಹೆಚ್ಚಾಗಿದ್ದರಿಂದ ನದಿ ದಡದ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಬೆಳಗಾವಿ ನಗರ ಮತ್ತು ಖಾನಾಪುರ ತಾಲೂಕಿನ ವಿವಿಧ ಭಾಗಗಳಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದೆ.