ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರವಾನಗಿ ಪಡೆದ ಭೂ ಮಾಪಕರು ಬೈಲಹೊಂಗಲದಲ್ಲಿ ತಪಾಸಕ ಮಹಾಂತೇಶ ಬುರ್ಲಬುಡ್ಡಿಮಠ, ತಪಾಸಕಿ ಸವಿತಾ ಮೇಲಿನಮನಿಗೆ ಮನವಿ ಸಲ್ಲಿಸಿದರು. ಮೊಹಮ್ಮದ್​ಸೊಯಿಲ್​ ಮಿರ್ಜಾ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪರವಾನಗಿ ಪಡೆದ ಭೂ ಮಾಪಕರು ಬೈಲಹೊಂಗಲದಲ್ಲಿ ತಪಾಸಕ ಮಹಾಂತೇಶ ಬುರ್ಲಬುಡ್ಡಿಮಠ, ತಪಾಸಕಿ ಸವಿತಾ ಮೇಲಿನಮನಿಗೆ ಮನವಿ ಸಲ್ಲಿಸಿದರು. ಮೊಹಮ್ಮದ್​ಸೊಯಿಲ್​ ಮಿರ್ಜಾ ಇತರರಿದ್ದರು.
Published on
ಬೈಲಹೊಂಗಲ: ತತ್ಕಾಲ ಪೋಡಿ ಹಾಗೂ 11ಇ ನೆ ಸೇರಿ ಭೂ ಮಾಪನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಮಾನ ವೇತನ ನೀಡಬೇಕೆಂದು ಆಗ್ರಹಿಸಿ ಬೈಲಹೊಂಗಲ ಹಾಗೂ ಚನ್ನಮ್ಮನ ಕಿತ್ತೂರು ತಾಲೂಕು ಪರವಾನಗಿ ಪಡೆದ ಭೂ ಮಾಪಕರು ನಗರದಲ್ಲಿ ತಪಾಸಕ ಮಹಾಂತೇಶ ಬುರ್ಲಬುಡ್ಡಿಮಠ, ಕಿತ್ತೂರು ತಪಾಸಕಿ ಸವಿತಾ ಮೇಲಿನಮನಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು. ವಿವಿಧ ಬೇಡಿಕೆ ಈಡೇರಿಕೆಗಾಗಿ ರಾಜ್ಯ ಟಕದ ಕರೆ ಮೇರೆಗೆ ಸಾಂಕೇತಿಕ ಪ್ರತಿಭಟನೆ ಕೈಗೊಂಡಿದ್ದೇವೆ. ಸರ್ಕಾರಿ ಭೂ ಮಾಪಕರು ಮಾಡುವ ಎಲ್ಲ ಕೆಲಸ ನಾವೂ ಮಾಡುತ್ತೇವೆ. ಆದರೆ, ವೇತನದಲ್ಲಿ ತಾರತಮ್ಯವಿದೆ. ಹೀಗಾಗಿ, ಕೆಲಸಕ್ಕೆ ಅನುಗುಣವಾಗಿ ವೇತನ ನೀಡಬೇಕೆಂದು ಆಗ್ರಹಿಸಿದರು. ಆದರೆ, ಅವರ ಸಂಭಾವನೆ ಮರೀಚಿಕೆ ಆಗಿದೆ. ಸರ್ಕಾರಿ ನೌಕರರೆಂದು ಪರಿಗಣಿಸುವವರೆಗೂ ರಾಜ್ಯಾದ್ಯಂತ ಮಂಗಳವಾರ ಮುಷ್ಕರ ಕೈಗೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.ಸಂಟನೆ ತಾಲೂಕಾಧ್ಯ ಮೊಹಮ್ಮದ್​ಸೊಯಿಲ್​ ಮಿರ್ಜಾ, ಉಪಾಧ್ಯ ಉಳವೇಶ ಮಾಟೋಳ್ಳಿ, ನಾಗರಾಜ ದೇಸಾಯಿ, ಅಭಿಷೇಕ ಚಿತ್ರಗಾರ, ರಾಕೇಶ ಗದಗ, ಸೋಮಪ್ಪ ಬೇವಿನಗಿಡದ, ರಾಜೇಸಾಬ್​ ಮುಲ್ಲಾ, ಶ್ರೀಧರ ಗರ್ಜೂರ, ಸಚಿನ ಶಿಂಧೆ, ಸೋಮನಗೌಡ ನಾಡಗೌಡರ, ಮಹೇಶ ಹಾರುಗೋಪ್ಪ, ದಾನಪ್ಪ ಅಂಗಡಿ, ನಾಗರಾಜ ದೇಸಾಯಿ, ಅಭಿಷೇಕ ಚಿತ್ರಗಾರ, ರಾಕೇಶ ಗದಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net