ವೈವಿಧ್ಯಮಯ ಕಾರ್ಯಕ್ರಮ ಮೇ 5ರಂದು

,
,
Published on

ಪ್ರಮುಖ ಮುಖ್ಯಾಂಶಗಳು

  • ಕಸಾಪ ಸಂಸ್ಥಾಪನಾ ದಿನಾಚರಣೆ
ಕಲಬುರಗಿ: ಕನ್ನಡ ನಾಡು&ನುಡಿಯ ಪ್ರೇರಕ ಶಕ್ತಿಯಂತಿರುವ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಈ ಬಾರಿ ಹಲವು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಕಸಾಪ ಸ್ಥಾಪನೆಯಾದಾಗಿನಿಂದ ಈವರೆಗೆ ಅನೇಕ ಮಹನೀಯರು, ಹೋರಾಟಗಾರರು ವಿಭಿನ್ನವಾದ ಸೇವೆ ನೀಡಿ, ಪರಿಷತ್​ ಬೆಳವಣಿಗೆಗೆ ಹಿಂದಿನ ಜಿಲ್ಲಾಧ್ಯಕ್ಷರೆಲ್ಲರೂ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಪರಿಷತ್ತು ಕಲೆ, ಸಾಹಿತ್ಯ, ಸಂಸತಿ ಹಾಗೂ ನಾಡು&ನುಡಿ ಉಳಿಸಿ ಬೆಳೆಸುವ ಕಾರ್ಯ ಕಳೆದ ನಾಲ್ಕು ವರ್ಷಗಳಿಂದ ಉತ್ತಮ ರೀತಿಯಲ್ಲಿ ಮಾಡುತ್ತಿದೆ ಎಂದು ಹೇಳಿದ್ದಾರೆ.
2021ರ ನವೆಂಬರ್​ನಿಂದ ಈವರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಐದು ಸಮ್ಮೇಳನಗಳು, 12 ವಿವಿಧ ವಿಶೇಷ ಸಮ್ಮೇಳನ ನಡೆಸಿ ಜಿಲ್ಲೆಯ ಜನರ ವಿಶೇಷ ಗಮನ ಸೆಳೆಯಲಾಗಿದೆ. ಇನ್ನುಳಿದ ಅವಧಿಯಲ್ಲಿ ಇನ್ನೂ ಅನೇಕ ವಿಶೇಷ ಸಮ್ಮೇಳನ ನಡೆಸುವ ಮೂಲಕ ಮತ್ತೊಮ್ಮೆ ಸಾಂಸತಿಕ ಜಿಲ್ಲೆಯನ್ನಾಗಿಸುವ ಪಣ ತೊಡಲಾಗಿದೆ ಎಂದಿದ್ದಾರೆ.
ಮೇ 5ರಂದು ಬೆಳಗ್ಗೆ 10.30ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಿರುವ ಸಮಾರಂಭವನ್ನು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್​ ಉದ್ಘಾಟಿಸಲಿದ್ದು, ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ, ವೈದ್ಯ ಸೇವಕ ಡಾ.ಎಸ್​.ಬಿ.ಕಾಮರೆಡ್ಡಿ, ಡಾ.ಅಂಬೇಡ್ಕರ್​ ಪ್ರಶಸ್ತಿ ಪುರಸತ ಸಾಹಿತಿ ಡಾ.ಹನುಮಂತರಾವ ದೊಡ್ಮನಿ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲೆಯ 112 ಜನ ಲೇಖಕರ ಪುಸ್ತಕ ಪ್ರದರ್ಶನವೂ ಈ ಸಂದರ್ಭದಲ್ಲಿ ಜರುಗಲಿದ್ದು, ಜಿಲ್ಲೆಯ ಹಿರಿಯ ಪತ್ರಕರ್ತರು, ಕಸಾಪ ಹಿರಿಯ ಸದಸ್ಯರು, ಪ್ರಮುಖ ಲೇಖಕರು, ಸಂಚಾರಿ ಪೊಲೀಸ್​ ಸಿಬ್ಬಂದಿಯನ್ನು ವಿಶೇಷವಾಗಿ ಸತ್ಕರಿಸಲಾಗುವುದು. ಪ್ರಸಿದ್ಧ ಸಂಗೀತಕಲಾವಿದರಿಂದ ಜನಪದ, ತತ್ವಪದಗಳ ಗಾಯನವೂ ನಡೆಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net