ಅಗತ್ಯಕ್ಕನುಗುಣವಾಗಿ ಹಣ ಬಳಸಿಕೊಳ್ಳಿ

ಯಾದಗಿರಿ ನಗರದಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ ಗುರುವಾರ ಶಾಸಕ ಶರಣಗೌಡ ಕಂದಕೂರ ಅವರು ಪ್ರಕೃತಿ ವಿಕೋಪದಡಿ ಮಂಜೂರಾಗಿರುವ ಪರಿಹಾರದ ಚೆಕ್​ನ್ನು ವಿತರಿಸಿದರು. ಜೆಡಿಎಸ್​ ಜಿಲ್ಲಾಧ್ಯ ಸುಭಾಶಚಂದ್ರ ಕಟಕಟಿ, ಈಶ್ವರಸಿಂಗ್​ ನಾಯಕ, ವಿರುಪಾಪ್ಪ ಸಾಹುಕಾರ, ಶರಣರಡ್ಡಿ, ಹಂಪಯ್ಯ, ಸೋಮಯ್ಯ, ಭಾಸ್ಕರ, ಭಾಗಣ್ಣಗೌಡ ಅಲ್ಲಿಪೂರ, ಯಲ್ಲಾಲಿಂಗ ಗೂಡೂರು, ಶಿವಯೋಗಿ, ಮರೆಪ್ಪ ಚಡಬಾ, ನರಸಿಂಹರಡ್ಡಿ ಚಿಂತಗುಂಟಾ ಇತರರಿದ್ದರು.
ಯಾದಗಿರಿ ನಗರದಲ್ಲಿರುವ ತಮ್ಮ ಶಾಸಕರ ಕಚೇರಿಯಲ್ಲಿ ಗುರುವಾರ ಶಾಸಕ ಶರಣಗೌಡ ಕಂದಕೂರ ಅವರು ಪ್ರಕೃತಿ ವಿಕೋಪದಡಿ ಮಂಜೂರಾಗಿರುವ ಪರಿಹಾರದ ಚೆಕ್​ನ್ನು ವಿತರಿಸಿದರು. ಜೆಡಿಎಸ್​ ಜಿಲ್ಲಾಧ್ಯ ಸುಭಾಶಚಂದ್ರ ಕಟಕಟಿ, ಈಶ್ವರಸಿಂಗ್​ ನಾಯಕ, ವಿರುಪಾಪ್ಪ ಸಾಹುಕಾರ, ಶರಣರಡ್ಡಿ, ಹಂಪಯ್ಯ, ಸೋಮಯ್ಯ, ಭಾಸ್ಕರ, ಭಾಗಣ್ಣಗೌಡ ಅಲ್ಲಿಪೂರ, ಯಲ್ಲಾಲಿಂಗ ಗೂಡೂರು, ಶಿವಯೋಗಿ, ಮರೆಪ್ಪ ಚಡಬಾ, ನರಸಿಂಹರಡ್ಡಿ ಚಿಂತಗುಂಟಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಶರಣಗೌಡ ಕಂದಕೂರ ಸಲಹೆ
  • ಪ್ರಕೃತಿ ವಿಕೋಪ ಪರಿಹಾರದಡಿ ಐವರಿಗೆ ಚೆಕ್​ ವಿತರಣೆ
ಯಾದಗಿರಿ: ಸಕಾಲಕ್ಕೆ ಮಳೆ, ಬೆಳೆ ಇಲ್ಲದೆ ಮೊದಲೆ ಸಂಕಷ್ಟದಲ್ಲಿದ್ದಿರಿ, ಸರ್ಕಾರ ನೀಡಿರುವ ಈ ಪರಿಹಾರದ ಹಣವನ್ನು ವ್ಯರ್ಥವಾಗಿ ಹಾಳು ಮಾಡಬೇಡಿ. ಅಗತ್ಯಕ್ಕನುಗುಣವಾಗಿ ಬಳಸಿಕೊಳ್ಳಿ. ಸರ್ಕಾರದ ಸೌವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಗುರುಮಠಕಲ್​ ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.
ನಗರದ ತಮ್ಮ ಕಚೇರಿಯಲ್ಲಿ ಗುರುವಾರ ಪ್ರಕೃತಿ ವಿಕೋಪದಡಿ ಮಂಜೂರಾಗಿರುವ ಪರಿಹಾರ ಚೆಕ್​ನ್ನು ವಿತರಿಸಿ ಮಾತನಾಡಿದ ಅವರು, ಪರಿಹಾರದ ಹಣವನ್ನು ಸರಿಯಾಗಿ ಬಳಸಿಕೊಂಡು ಮಕ್ಕಳ ವಿದ್ಯಾಭ್ಯಾಸದ ಜತೆಗೆ ಕುಟುಂಬದ ಆರ್ಥಿಕ ಸಂಕಷ್ಟವನ್ನೂ ದೂರ ಮಾಡಿಕೊಳ್ಳಬೇಕು. ನಿಮ್ಮ ಜತೆ ನಾನಿದ್ದೇನೆ ಯಾವುದಕ್ಕೂ ಎದೆಗುಂದದೆ ಜೀವನ ನಡೆಸಿ, ಕಷ್ಟವಾದರೆ ನನ್ನ ಹತ್ತಿರ ಬನ್ನಿ ಎಂದ ಸಾಂತ್ವಾನ ಹೇಳಿದರು.
ಪ್ರಕೃತಿ ವಿಕೋಪದಿಂದ ಜಾನುವಾರಗಳು ಸತ್ತರೆ ಅವುಗಳ ಸಾಕಣೆದಾರರಿಗೆ ಸರ್ಕಾರ ಪರಿಹಾರ ವಿತರಿಸುವ ಕೆಲಸ ಮಾಡುತ್ತಿದೆ, ಇದರಿಂದ ಬಡವರು ಜೀವನ ನಡೆಸಲು ಸರಳ ದಾರಿ ಮಾಡಿಕೊಟ್ಟಿದೆ ಎಂದರು. ಈ ವೇಳೆ ಜೆಡಿಎಸ್​ ಜಿಲ್ಲಾಧ್ಯ ಸುಭಾಶಂದ್ರ ಕಟಕಟಿ, ಈಶ್ವರಸಿಂಗ್​ ನಾಯಕ, ವಿರುಪಾಪ್ಪ ಸಾಹುಕಾರ, ಶರಣರಡ್ಡಿ, ಹಂಪಯ್ಯ, ಸೋಮಯ್ಯ, ಭಾಸ್ಕರ, ಭಾಗಣ್ಣಗೌಡ ಅಲ್ಲಿಪೂರ, ಯಲ್ಲಾಲಿಂಗ ಗೂಡೂರು, ಶಿವಯೋಗಿ, ಮರೆಪ್ಪ ಚಡಬಾ, ನರಸಿಂಹರಡ್ಡಿ ಚಿಂತಗುಂಟಾ, ಶಿವಶರಣಪ್ಪ, ಭೀಮರಾಯ ಇದ್ಲಿ, ನಾಗರಡ್ಡಿ, ಹರ್ಷವರ್ಧನರಡ್ಡಿ, ಶಿವಶರಣಪ್ಪ ಪರಡಿ ಇತರರಿದ್ದರು.
ಫಲಾನುಭವಿಗಳ ವಿವರ
ಪ್ರಕೃತಿ ವಿಕೋಪ ಪರಿಹಾರದಡಿ ಯರಗೋಳದಲ್ಲಿ ಮೃತಪಟ್ಟ ದಿ.ಸೋಮರಾಯ ರಾಮಲಿಂಗಪ್ಪ ಕುಟುಂಬಕ್ಕೆ 5 ಲ, ಅಲ್ಲಿಪೂರದಲ್ಲಿ ಮೃತಪಟ್ಟ ದಿ.ಸುನೀಲ್​ ಆನಂದ ರಾಮಣ್ಣೋರ್​ ಕುಟುಂಬಕ್ಕೆ 5 ಲ, ಗೊಂದೆಡಗಿಯ ರೈತ ಸಿದ್ದಪ್ಪ ಶಂಕ್ರಪ್ಪ ಹೂಗಾರ ರವರಿಗೆ 3 ಆಕಳು ಮೃಪಟ್ಟಿದ್ದರಿಂದ 75 ಸಾವಿರ, ಗೂಡೂರಿನ ರೈತ ಶೇಖಪ್ಪ ರಾಮಣ್ಣನವರಿಗೆ 1 ಎತ್ತು ಮೃತಪಟ್ಟಿದ್ದರಿಂದ 50 ಸಾವಿರ, ಹತ್ತಿಕುಣಿಯ ರೈತ ಮಲ್ಲಪ್ಪ ಸಲೇರಿಯವರಿಗೆ 1 ಆಡು ಮೃತಪಟ್ಟಿದ್ದರಿಂದ 20 ಸಾವಿರ ಪರಿಹಾರ ಧನದ ಚೆಕ್​ನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net