ಮೂತ್ರಾಲಯದ ಸುತ್ತಮುತ್ತ ಜಮೆಯಾಗಿದ್ದ ಮಣ್ಣು, ಕಸ ಹಾಗೂ ಪೊದೆಗಳನ್ನು ತೆರವುಗೊಳಿಸಿದ್ದಾರೆ. ಪಕ್ಕದಲ್ಲಿಯೇ ಹಾದುಹೋಗಿರುವ ಒಳ ಚರಂಡಿ ಲೈನ್ ಬ್ಲಾಕ್ ಆಗಿದ್ದರಿಂದ ಈ ಸಮಸ್ಯೆ ಉಂಟಾಗಿತ್ತು. ನಗರದ ಎಲ್ಲ ಸಾರ್ವಜನಿಕ ಮೂತ್ರಾಲಯಗಳ ಸ್ವಚ್ಛತೆಗಾಗಿ ಪ್ರತಿದಿನ ಒಂದು ವಾಹನ ಹಾಗೂ ಇಬ್ಬರು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದ್ದಗಿಮಠ ತಿಳಿಸಿದ್ದಾರೆ.