ನೀರಾವರಿ ಇಲಾಖೆಯ ಧಾರವಾಡ ವತ್ತದ ಅಧೀಕ ಅಭಿಯಂತ ಮಹಾವೀರ ಗಣಿ ಮಾತನಾಡಿ, ಜಲಾಶಯದ ನೀರಿನ ಮಟ್ಟ ಕಡಿಮೆಯಾಗಿದ್ದು, ೆಬ್ರವರಿ 25ರವರೆಗೆ ನೀರು ಬಿಡಲು ಅವಕಾಶ ಕಲ್ಪಿಸಲಾಗುವುದು ಎಂದರು. ಇದಕ್ಕೆ ರೈತರು ಒಪ್ಪದೇ ಪ್ರತಿಭಟನೆ ಮುಂದುವರಿಸಿದಾಗ ಸ್ಥಳಕ್ಕಾಗಮಿಸಿದ ನವೀಲುತೀರ್ಥ ವೃತ್ತದ ಕಾರ್ಯನಿರ್ವಾಹಕ ಅಭಿಯಂತ ಎಸ್.ಇ. ಸುಭಾಸ ನಾಯ್ಕ ಮಾತನಾಡಿ, ೆ.28ರ ವರೆಗೆ ನೀರು ಬಿಡಲಾಗುವುದು. ಸಮಿತಿಯ ಸಭೆ ಕರೆಯಿಸಿ ರೆತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೆಗೊಳ್ಳುವುದಾಗಿ ತಿಳಿಸಿದಾಗ ಪ್ರತಿಭಟನೆ ಹಿಂಪಡೆಯಲಾಯಿತು. ರಾಮದುರ್ಗ ಡಿವೆಎಸ್ಪಿ ಚಿದಂಬರ ಮಡಿವಾಳರ, ಶಂಕರಗೌಡ ಪಾಟೀಲ, ಮುತ್ತು ಕೌಜಗೇರಿ, ಗದಗ ಜಿಲ್ಲಾ ಅಧ್ಯ ಬಸವರಾಜ ಸಾಬಳೆ, ಗಂಗಪ್ಪ ಕಾಲವಾಡ, ಮಹಾಂತೇಶ ಹೆಬಸೂರ, ಕೆಂಚನಗೌಡ ರಾಯನಗೌಡ್ರ, ಇಸ್ಮಾಯಿಲ್ ನದಾಫ್, ನಾಗನಗೌಡ ರೋಣದ, ಹೆಮರಡ್ಡಿ ಹುಚರಡ್ಡಿ, ಬಾಳಮ್ಮ ಮುದೇನೂರ, ಸವಿತಾ ಮುದೇನೂರ, ಸಂಗೀತಾ ಪೂಜೇರ ಇತರರು ಇದ್ದರು.