ಅವೈಜ್ಞಾನಿಕ ರಸ್ತೆ ನಿರ್ಮಾಣ ಉರುಳಿದ ಲಾರಿ

ಕೆಂಭಾವಿ&ಮಲ್ಲಾ ರಾಜ್ಯ ಹೆದ್ದಾರಿಯ ಪಕ್ಕ ಶುಕ್ರವಾರ ಉರುಳಿ ಬಿದ್ದ ಭತ್ತ ತುಂಬಿದ ಲಾರಿ.
ಕೆಂಭಾವಿ&ಮಲ್ಲಾ ರಾಜ್ಯ ಹೆದ್ದಾರಿಯ ಪಕ್ಕ ಶುಕ್ರವಾರ ಉರುಳಿ ಬಿದ್ದ ಭತ್ತ ತುಂಬಿದ ಲಾರಿ.
Published on
ಕೆಂಭಾವಿ: ಆಮೆಗತಿಯಲ್ಲಿ ಸಾಗಿದ ಕೆಂಭಾವಿ&ಮಲ್ಲಾ ರಸ್ತೆಯಲ್ಲಿ ಶುಕ್ರವಾರ ಮತ್ತೊಂದು ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭತ್ತ ತುಂಬಿದ ಲಾರಿಯೊಂದು ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಉರುಳಿ ಬಿದ್ದಿದ್ದು ಇದಕ್ಕೆ ಅವೈಜ್ಞಾನಿಕ ರಸ್ತೆ ನಿರ್ಮಾಣವೇ ಕಾರಣ ಎಂದು ಹೇಳಲಾಗುತ್ತಿದೆ.
ಮಲ್ಲಾ ಗ್ರಾಮದಿಂದ ಭತ್ತ ತುಂಬಿಕೊಂಡು ಕೆಂಭಾವಿ ಪಟ್ಟಣಕ್ಕೆ ಬರುತ್ತಿದ್ದ ಲಾರಿಯೊಂದು ರಸ್ತೆಯ ಪಕ್ಕ ಹಾಕಲಾಗಿದ್ದ ಕಂಕರ ಮತ್ತು ಮಣ್ಣಿನ ನಡುವೆ ಸಿಲುಕಿ ಉರುಳಿದ್ದು ಅದೃಷ್ಟವಶಾತ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡು ವರ್ಷಗಳೆ ಗತಿಸಿದರೂ ಕಾಮಗಾರಿ ಮಾತ್ರ ಸಂಪೂರ್ಣ ಆಮೆಗತಿಯಲ್ಲಿ ಸಾಗಿದ್ದು ಕೇವಲ 10 ಕಿಮೀ ಕಾಮಗಾರಿ ನಿರ್ವಹಣೆಗೆ ವರ್ಷ ಗತಿಸಿದರೂ ಮುಕ್ತಿ ಸಿಗದೆ ವಾಹನಗಳ ಸುಗಮ ಸಂಚಾರಕ್ಕೆ ಸಂಚಕಾರ ಬಂದಿದ್ದು ಇದರಿಂದ ಜನತೆ ನಿತ್ಯ ಹೈರಾಣಾಗುತ್ತಿದ್ದಾರೆ.
ರಸ್ತೆ ನಿರ್ಮಾಣ ಮಾಡುವಾಗ ರಸ್ತೆಗೆ ನೀರು ಹಾಕಬೇಕು ಎಂಬ ನಿಯಮವಿದ್ದರೂ ಗುತ್ತಿಗೆದಾರರು ಈ ಬಗ್ಗೆ ಸಂಪೂರ್ಣ ರ್ನಿಲಕ್ಷ ವಹಿಸಿದ್ದು ಧೂಳಿನಿಂದ ವಾಹನಗಳ ಅಪಘಾತಗಳು ಇಲ್ಲಿ ಹೆಚ್ಚಾಗುತ್ತಿವೆ. ರಸ್ತೆ ಮೇಲೆ ಕಂಕರ ಹಾಕಿದ್ದು ರೂಲರ್​ ಆಡಿಸದೆ ಇರುವುದು ದುರಂತಕ್ಕೆ ಕಾರಣವಾಗುತ್ತಿದ್ದು ಇಂಥಾ ಹಲವು ಲೋಪದೋಷಗಳು ಈ ರಸ್ತೆ ಕಾಮಗಾರಿಯಲ್ಲಿ ಕಂಡು ಬರುತ್ತಿದ್ದು ಕೂಡಲೆ ಈ ಬಗ್ಗೆ ಲೋಕೋಪಯೋಗಿ ಇಲಾಖೆ ವಿಶೇಷ ಗಮನ ಹರಿಸಿ ಬೇಗ ರಸ್ತೆ ಕಾಮಗಾರಿ ಮುಗಿಸಿ ಜನತೆಗೆ ಅನುಕೂಲ ಕಲ್ಪಿಸಬೇಕೆಂಬುದು ಜನತೆಯ ಒತ್ತಾಯವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net