ದೇಶದ ಸಮೃದ್ಧಿಗೆ ಒಕ್ಕಲುತನ ಮುಖ್ಯ

ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಜತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನದ ಸಮಾರೋಪ ಸಮಾರಂಭವನ್ನು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಘಾಟಿಸಿದರು. ರಮೇಶ ಮಹೇಂದ್ರಕರ್​, ಡಾ.ಬದ್ರಿಪ್ರಸಾದ, ಮಲ್ಲಿಕಾರ್ಜುನ ವನದುರ್ಗ, ತಿಮ್ಮಣ್ಣ ಚೌಡಿ, ಡಾ.ಶಶಿಕಾಂತ ಕಟ್ಟಿಮನಿ ಇತರರಿದ್ದರು.
ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಜತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸಮ್ಮಿಲನದ ಸಮಾರೋಪ ಸಮಾರಂಭವನ್ನು ಶ್ರೀ ಶಿವಕುಮಾರ ಮಹಾಸ್ವಾಮೀಜಿ ಉದ್ಘಾಟಿಸಿದರು. ರಮೇಶ ಮಹೇಂದ್ರಕರ್​, ಡಾ.ಬದ್ರಿಪ್ರಸಾದ, ಮಲ್ಲಿಕಾರ್ಜುನ ವನದುರ್ಗ, ತಿಮ್ಮಣ್ಣ ಚೌಡಿ, ಡಾ.ಶಶಿಕಾಂತ ಕಟ್ಟಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶಿವಕುಮಾರ ಮಹಾಸ್ವಾಮೀಜಿ ನುಡಿ
  • ಭೀ.ಗುಡಿಯಲ್ಲಿ ಹಳೇ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ
ಶಹಾಪುರ: ಒಕ್ಕಲುತನ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಸಮೃದ್ಧಿ ಸಾಧ್ಯವಿದೆ. ಈ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನಾತ್ಮಕ ಕಾರ್ಯ ಕೈಗೊಂಡು ಕೃಷಿ ಕ್ಷೇತ್ರ ವಿಕಸಿತಗೊಳಿಸಬೇಕು ಎಂದು ಕಪ್ಪತಗುಡ್ಡದ ನಂದಿವೇರಿ ಸಂಸ್ಥಾನ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಕಿವಿಮಾತು ಹೇಳಿದರು.
ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದ ಪ್ರೇಾಗೃಹದಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮಹಾವಿದ್ಯಾಲಯದ ರಜತ ಮಹೋತ್ಸವ ಮತ್ತು ಹಳೇ ವಿದ್ಯಾರ್ಥಿಗಳ ಸಮ್ಮಿಲನ-2026 ಸಮಾರೋಪದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಕಪ್ಪತಗುಡ್ಡ ತಮಗೆಲ್ಲರಿಗೂ ತಿಳಿದಿರುವಂತೆ ಅಗಾಧ ಸಸ್ಯರಾಶಿ ಹೊಂದಿದ ಹಸಿರು ಗುಡ್ಡ. ಸುಮಾರು 80 ಸಾವಿರ ಎಕರೆ ಹಸಿರು ಬೆಟ್ಟ. ಕಪ್ಪತಗುಡ್ಡ ಉಳಿಕೆಗೆ ಗದಗ-ರೋಣ ಜನರೊಂದಿಗೆ ಸಾಕಷ್ಟು ಹೋರಾಟ ಮಾಡಿದ್ದೇನೆ. ಇಲ್ಲವಾದಲ್ಲಿ ಸಂಡೂರ&ಬಳ್ಳಾರಿ ಗುಡ್ಡ ಅಗೆದಂತೆ ಗಣಿಗಾರಿಕೆ ನಡೆಸಿ ಅಪಾರ ಜೀವ ಮತ್ತು ಸಸ್ಯ ವೈವಿಧ್ಯವನ್ನು ಅಗೆದು ಬಗೆದು ಬಿಡುತ್ತಿದ್ದರು. ನಾನು ರಿಸ್ಕ್​ ತೊಗೊಂಡ ಪರಿಣಾಮ ಇಂದು ಕಪ್ಪತಗುಡ್ಡ ಸುರಕ್ಷಿತವಾಗಿದೆ ಎಂದು ತಿಳಿಸಿದರು.
ತಾವೆಲ್ಲ ಸ್ನಾತಕ್ಕೋತ್ತರ ಪದವಿ ಪಡೆದು ಕೃಷಿ ವಿಾನಿ, ಸಂಶೋಧಕರಾಗಿ ಕಪತಗುಡ್ಡಕ್ಕೆ ಬಂದು ಸಾವಿರಾರು ಸಸ್ಯಗಳನ್ನು ಸಂಶೋಧಿಸಿ ಸದುಪಯೋಗ ಕುರಿತು ತಿಳಿಸಿಕೊಡುವ ಮೂಲಕ ರಣೆಗೆ ಮುಂದಾಗಬೇಕು. ಕೃಷಿ ಶ್ರೇಷ್ಠ ಕಾಯಕ. ಅನ್ನ ನೀಡುವ ಕಾರ್ಯ ಶ್ರೇಷ್ಠತೆ ಪಡೆಯುತ್ತದೆ. ಹೀಗಾಗಿ ನೀವೆಲ್ಲರೂ ತಂತ್ರಾನ ಬಳಸಿ ವಿನೂತನ ಕೃಷಿಯತ್ತ ಚಿತ್ತ ಹರಿಸಿ ದೇಶದ ಏಳಿಗೆಗಾಗಿ ಒಕ್ಕಲುತನಕ್ಕೆ ಉತ್ತೇಜನ ನೀಡಬೇಕು ಎಂದು ಹೇಳಿದರು.
ಕಾಲೇಜು ಡೀನ್​ ಡಾ.ಪಿ.ಎಚ್​. ಕುಚನೂರ ಅಧ್ಯತೆ ವಹಿಸಿದ್ದರು. ರಮೇಶ ಮಹೇಂದ್ರಕರ್​, ಡಾ.ಬದ್ರಿಪ್ರಸಾದ, ಮಲ್ಲಿಕಾರ್ಜುನ ವನದುರ್ಗ ಮಾತನಾಡಿದರು. ತಿಮ್ಮಣ್ಣ ಚೌಡಿ, ಹಳೇ ವಿದ್ಯಾರ್ಥಿ ಸಂದ ಅಧ್ಯ ಡಾ.ಶಶಿಕಾಂತ ಕಟ್ಟಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net