"ಮುಂದೆ ಗುರಿ, ಹಿಂದೆ ಗುರು" ಇರಬೇಕು ಎಂದು ಸಾಧು, ಸಂತರು, ಸಮಾಜ ಸುಧಾರಕರು, ಬಸವಣ್ಣನವರು ಹೇಳಿದ್ದು ಎಂದರು. ಸಮಾಜದಲ್ಲಿರುವ ಎಲ್ಲರೂ ಕಾಯಕವನ್ನು ಮಾಡಬೇಕು, ಉತ್ಪಾದನಾ ಪ್ರಕ್ರಿಯೆಯಲ್ಲಿ ಭಾಗವಹಿಸಿ,ಉತ್ಪನ್ನವನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಅಸಮಾನತೆ ಹೋಗಲಾಡಿಸಲು ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ದೊರಕಬೇಕು ಎಂದರು.