ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಘಟನೆಯಿಂದ ಮನನೊಂದ 14 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಆದರೂ ಪ್ರಧಾನಿ ಸೇರಿ ಕೇಂದ್ರದ ಯಾರೋಬ್ಬರು ಸಾಂತ್ವನ ಕೂಡ ಹೇಳಲಿಲ್ಲ, ಅವರ ಮನೆಗಳಿಗೆ ಭೇಟಿ ನೀಡಲಿಲ್ಲ ಎಂದು ದೂರಿದರು. ದೇಶದಲ್ಲಿ ಪೇಪರ್ ಲೀಕ್ ಮಾಫಿಯಾ ವೆಂಡರ್ಗಳು, ಅಧಿಕಾರಿಗಳು ಮತ್ತು ರಾಜಕೀಯ ರಕ್ಷಣೆ ಜಾಲಗಳೊಂದಿಗೆ ಅವರಿಗಿರುವ ಸಂಪರ್ಕದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.