ಕನಕದಾಸರ ಸಾತ್ವಿಕ ನೆಲೆಗಟ್ಟು ಅರ್ಥೈಸಿಕೊಳ್ಳಿ

ಕಲಬುರಗಿಯ ಎಂ.ಎನ್​.ದೇಸಾಯಿ ಪದವಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕನಕ ದರ್ಶನ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಶಿವರಂಜನ್​ ಸತ್ಯಂಪೇಟೆ, ತಿರುಪತಿ ಹತ್ತಿಕಟಗಿ, ಜಗನ್ನಾಥ್​ ನಾಗೂರ, ಕಾಶಿನಾಥ್​ ಮರತೂರ, ಹಣಮಂತ ಅಟ್ಟೂರ, ಗುಂಡಣ್ಣ ಡಿಗ್ಗಿ, ಸಂದೀಪ್​ ದೇಸಾಯಿ ಇತರರಿದ್ದರು.

Published on

ಕಲಬುರಗಿ: ಮನದ ಮೈಲಿಗೆ ತೊಳೆದುಕೊಳ್ಳಬೇಕಾದರೆ ಕನಕದಾಸರ ಸಾಹಿತ್ಯದ ಸಾತ್ವಿಕ ನೆಲೆಗಟ್ಟನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಪತ್ರಕರ್ತ ಡಾ.ಶಿವರಂಜನ್​ ಸತ್ಯಂಪೇಟೆ ಹೇಳಿದರು. ಎಂ.ಎನ್​.ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್​ ಸಹಯೋಗದಲ್ಲಿ ಕನ್ನಡದ ಸಂತ ಕವಿ ಕನಕದಾಸರ ಕುರಿತು ಕನಕ ದರ್ಶನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕನಕದಾಸರು ಕವಿಗಳಾಗಿ, ಬಂಡಾಯ ಬರಹಗಾರರಾಗಿ, ತತ್ವಪದಕಾರ, ದಾಸರಾಗಿ, ಸಮಾಜ ಸುಧಾರಕರಾಗಿ ಸೇವೆ ಸಲ್ಲಿಸುವುದರ ಜತೆಗೆ ಮಾನವೀಯ ಮೌಲ್ಯ ಎತ್ತಿ ಹಿಡಿದವರು ಎಂದು ಬಣ್ಣಿಸಿದರು. ಯುವ ಮುಖಂಡ ತಿರುಪತಿ ಹತ್ತಿಕಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಾವಿದ್ಯಾಲಯದ ಕಾರ್ಯದರ್ಶಿ ಜಗನ್ನಾಥ್​ ನಾಗೂರ ಅಧ್ಯಕ್ಷತೆ ವಹಿಸಿದ್ದರು. ಪ್ರಜ್ಞಾ ಸೇವಾ ಸಂಸ್ಥೆಯ ಅಧ್ಯಕ್ಷ ಕಾಶಿನಾಥ್​ ಮರತೂರ, ನ್ಯಾಯವಾದಿ ಹಣಮಂತ ಅಟ್ಟೂರ, ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಂದೀಪ್​ ದೇಸಾಯಿ ಇತರರಿದ್ದರು. ಕಲಾನಿಕೇತನ ಟ್ರಸ್ಟ್​ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಅಂಬಿಕಾ ಪಾಟ್ನಾ ನಿರೂಪಣೆ ಮಾಡಿದರು, ನಾಗರಾಜ್​ ಪಟ್ಟಣಕರ್​ ಸ್ವಾಗತಿಸಿದರು, ಡಿ.ಪಿ.ಸಜ್ಜನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net