ಯುಜಿಸಿ ಸೂಚಿಸಿದಂತೆ, ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜು ಮೂಲಸೌಕರ್ಯ, ಶೈಕ್ಷಣಿಕ ಸಿಬ್ಬಂದಿ, ಆಡಳಿತ ಮತ್ತು ಗುಣಮಟ್ಟದ ಮಾನದಂಡಗಳಿಗೆ ಸಂಬಂಧಿಸಿದ ಎಲ್ಲಾ ಕಡ್ಡಾಯ ಅವಶ್ಯಕತೆ ಪೂರೈಸಿದ ನಂತರ ಯುಜಿಸಿ ಕಾಯ್ದೆಯ ಸೆಕ್ಷನ್ 2(ಎಫ್) ಅಡಿ ಈ ಕಾಲೇಜು ಮಾನ್ಯತೆಗೆ ಗುರುತಿಸಲಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ ಮಾನ್ಯತೆ ಪಡೆಯುವುದರಿಂದ ಕಾಲೇಜಿನ ಖ್ಯಾತಿ ಮತ್ತು ಶೈಕ್ಷಣಿಕ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಕಾಲೇಜು ಉನ್ನತ ಶಿಕ್ಷಣದ ಗುಣಮಟ್ಟದ ಮಾನದಂಡ ಪೂರೈಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು, ಇತರ ಸಂಸ್ಥೆಗಳು ಮತ್ತು ಉದ್ಯೋಗ ನೀಡುವ ಸಂಸ್ಥೆಗಳಿಗೆ ಮನದಟ್ಟಾಗಲಿದೆ. ಇದರ ಫಲವಾಗಿ, ಯುಜಿಸಿ ಮಾನ್ಯತೆ ಪಡೆದ ಕಾಲೇಜು ನೀಡುವ ಪದವಿಗಳು ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸ, ಸರ್ಕಾರಿ ಉದ್ಯೋಗ ಮತ್ತು ವಿವಿಧ ೇತ್ರಗಳಲ್ಲಿ ಉದ್ಯೋಗಾವಕಾಶಗಳಿಗೆ ಅಂಗೀಕರಿಸಲ್ಪಡುತ್ತವೆ.