ಯುಜಿ ಪಿಜಿ ಫಲಿತಾಂಶ ಪ್ರಕಟ

,
,
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ
  • ವಿದ್ಯಾರ್ಥಿಗಳು ವಿವಿ ವೆಬ್​ಸೈಟ್​ ವೀಕ್ಷಿಸಿ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆದ ಸ್ನಾತಕ ಮತ್ತು ಮತ್ತು ಸ್ನಾತ್ತಕೋತ್ತರ ಪದವಿ ಕೋರ್ಸ್​ಗಳ ಪರೀಕ್ಷೆ ಫಲಿತಾಂಶ ಮಂಗಳವಾರ ಪ್ರಕಟಿಸಲಾಗಿದೆ.
ಏಪ್ರೀಲ್​ ಮತ್ತು ಮೇನಲ್ಲಿ ಜರುಗಿದ ಪದವಿಯ 4ನೇ ಸೆಮಿಸ್ಟರ್​, 6ನೇ ಸೆಮಿಸ್ಟರ್​ ಹಾಗೂ 8ನೇ ಸೆಮಿಸ್ಟರ್​ ಮತ್ತು ಸ್ನಾತ್ತಕೋತ್ತರ ಪದವಿಯ 2ನೇ ಸೆಮಿಸ್ಟರ್​ ಮತ್ತು 4ನೇ ಸೆಮಿಸ್ಟರ್​ ಹಾಗೂ ಎಂ.ಎಸ್ಸಿ ಮನೋವಿಜ್ಞಾನ ವಿಭಾಗದ 10ನೇ ಸೆಮಿಸ್ಟರ್​ ಪರೀಕ್ಷೆ ಫಲಿತಾಂಶ ವಿವಿಯ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.
ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿ, ವಿದ್ಯಾರ್ಥಿಗಳು ಪರೀಕ್ಷೆ ಬರೆದ ಕೇವಲ 15 ದಿನಗಳಲ್ಲಿ ಫಲಿತಾಂಶ ಘೋಷಣೆ ಮಾಡಿರುವುದು ಅತ್ಯಂತ ಹೆಮ್ಮೆಯ ಸಂಗತಿ. ಈ ಫಲಿತಾಂಶದಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಬೇಕಾದ ಉದ್ಯೋಗ ಪಡೆಯಲು ಮತ್ತು ಅವರ ಮುಂದಿನ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದ್ದಾರೆ.
ಫಲಿತಾಂಶ ಯಶಸ್ವಿಯಾಗಿ ಪ್ರಕಟಿಸಲು ಸಹಕರಿಸಿದ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​, ಪರೀಕ್ಷೆ ನಿಯಂತ್ರಕ ಪ್ರೊ.ಭರತ್​ ಕುಮಾರ್​ ಸೇರಿ ಎಲ್ಲ ವಿಭಾಗಗಳ ಡೀನ್​ರು, ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ವರ್ಗದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.
"

ವಿಶ್ವವಿದ್ಯಾಲಯವು ನಿರಂತರವಾಗಿ ಶೈಕ್ಷಣಿಕ ವರ್ಷಕ್ಕೆ ಅನುಸಾರ ಪ್ರಶ್ನೆಪತ್ರಿಕೆ ತಯಾರಿ ಮಾಡುವುದು, ಪರೀಕ್ಷೆ ನಡೆಸುವುದು, ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವುದು, ಫಲಿತಾಂಶ ಸಮಯಕ್ಕೆ ಅನುಗುಣವಾಗಿ ಘೋಷಣೆ ಮಾಡುತ್ತಾ ಬಂದಿದೆ. ಕೋವಿಡ್​ ಸಂದರ್ಭದಲ್ಲಿ ತೊಂದರೆಗೊಳಗಾದ ವಿವಿ ಶೈಕ್ಷಣಿಕ ಚಟುವಟಿಕೆಗಳು ಮರಳಿ ಸಮಯನುಸಾರ ನಡೆಸಲಾಗುತ್ತಿದೆ.

— ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ ಕಲಬುರಗಿ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net