ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 100 ಸೀಟು ಹಾಗೂ ಫಾರೂಕಿ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ 50 ಸೀಟು ಪ್ರವೇಶಕ್ಕೆ ಅವಕಾಶ
ಬಾಗಲಕೋಟೆಯದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿನ ಆಪ್ಷನ್ಸ್ ದಾಖಲಿಸಲು ಅವಕಾಶ
ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು.
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಹೆಚ್ಚುವರಿಯಾಗಿ 150 ವೈದ್ಯಕೀಯ ಸೀಟು ಲಭ್ಯವಾಗಿದ್ದು, ಆಸಕ್ತರು ಸೆ.9ರವರೆಗೆ ಆಪ್ಷನ್ಸ್ ದಾಖಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ತಿಳಿಸಿದ್ದಾರೆ.
ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿಗೆ 100 ಸೀಟು ಹಾಗೂ ಫಾರೂಕಿ ವೈದ್ಯಕೀಯ ಕಾಲೇಜಿಗೆ ಹೆಚ್ಚುವರಿಯಾಗಿ 50 ಸೀಟು ಪ್ರವೇಶಕ್ಕೆ ಅವಕಾಶ ನೀಡಿ ವೈದ್ಯಕೀಯ ಶಿಕ್ಷಣ ಇಲಾಖೆ ಕೆಇಎಗೆ ಪತ್ರ ಬರೆದಿದೆ. ಹೀಗಾಗಿ ಬಾಗಲಕೋಟೆಯದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿನ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.
ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು. ಆಪ್ಷನ್ಸ್ ಅದಲು- ಬದಲು ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದರು.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-2 ಮತ್ತು ಚಾಯ್ಸ್-3 ಆಯ್ಕೆ ಮಾಡಿರುವವರು ಹಾಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಅವರು ವಿವರಿಸಿದ್ದಾರೆ.