ಪ್ರತ್ಯೇಕ ಅಪಘಾತದಲ್ಲಿ ಇಬ್ಬರ ಸಾವು

DEATH
DEATH
Published on
ಕಾಗವಾಡ: ಉಪ್ಪಾರವಾಡಿ ಗ್ರಾಮದ ಬಳಿ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಾರಾಷ್ಟ್ರದ ಮಿರಜ ತಾಲೂಕಿನ ಸಾವಳಿ ಗ್ರಾಮದ ಮಹಾನಂದಾ ಚೌಗುಲೆ (38) ಸ್ಥಳದಲ್ಲೇ ಮೃತಪಟ್ಟಿದ್ದು, ಸವಾರ ಸಚಿನ ಚೌಗುಲೆ (44) ಗಂಭೀರ ಗಾಯಗೊಂಡಿದ್ದಾರೆ.
ಚಿಕಿತ್ಸೆಗಾಗಿ ಮಿರಜ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಮಿರಜ-ಚಿಕ್ಕೋಡಿ ಮಾರ್ಗದ ಶಿರಗುಪ್ಪಿ ಗ್ರಾಮದ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಬೈಕ್ ಡಿಕ್ಕಿಯಾಗಿ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ವಿಠ್ಠಲ ಬಸಪ್ಪ ಅಕ್ಕಿಮರಡಿ (50) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಾಗವಾಡ ಠಾಣೆ ಪೊಲೀಸರು ತಿಳಿಸಿದ್ದಾರೆ.
ಘಟನೆ ಸ್ಥಳಕ್ಕೆ ಎಎಸ್‌ಐ ಜೆ.ಎ.ಸೋನಾವನೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net