ತುಮಕೂರು: ತುಮಕೂರು ತಾಲೂಕು ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳಕ್ಕೆ ಹೈರಾಣಾಗಿದ್ದು ಮೇಲಾಧಿಕಾರಿಗಳಿಗೆ ದೂರು ನೀಡಲು ಸಂಟಿತರಾಗುತ್ತಿದ್ದಾರೆ. ತಾಲೂಕಿನಲ್ಲಿರುವ ಸರ್ಕಾರದ ಅನುದಾನಿತ 63 ಪ್ರೌಢಶಾಲೆಯಲ್ಲಿ 300ಕ್ಕೂ ಶಿಕ್ಷಕರು, ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಲಂಚದ ಹಾವಳಿಗೆ ಬೇಸತ್ತಿದ್ದಾರೆ.
ಸರ್ಕಾರದ ನೀಡಿರುವ ಸೌಲಭ್ಯಗಳನ್ನು ಪಡೆಯಲು ಹಣ ನೀಡಿದರಷ್ಟೇ ಮಂಜೂರಾತಿ ಎಂಬ ಗಂಭೀರ ಆರೋಪ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಿರುದ್ಧ ಕೇಳಿಬಂದಿದೆ. ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೂ ಹಣ ನೀಡಿ ಅನುಮತಿ ಪಡೆಯುವಂತಾಗಿದೆ ಎಂದು ಕೆಲವು ಶಿಕ್ಷಕರು "ವಿಜಯವಾಣಿ' ಕಚೇರಿಗೆ ಆಗಮಿಸಿ ಅಳಲು ತೋಡಿಕೊಂಡಿದ್ದಾರೆ.
ಅನುದಾನಿತ ಪ್ರೌಢಶಾಲೆಗಲ್ಲಿ ಜನವರಿ 2024ರಿಂದ ಡಿಸೆಂಬರ್ 2025ರ ವರೆಗೂ ಬರಬೇಕಿರುವ 5 ತುಟ್ಟಿಭತ್ಯೆ ಬಾಕಿ ಬಿಲ್ ಹಾಗೂ 7ನೇ ವತನ ಆಯೋಗದ ಪರಿಷತ ವರದಿಯ ಬಾಕಿ ಬಿಲ್ನ್ನು ತುಮಕೂರು ತಾಲೂಕಿನಲ್ಲಿ ಮಾತ್ರ ಮಂಜೂರು ಮಾಡದೆ ಸತಾಯಿಸುತ್ತಿರುವುದು ಅನುಮಾನಕ್ಕೆಡೆ ಮಾಡಿದೆ. ಕಳೆದ ಒಂದು ವರ್ಷದಿಂದ ಹಕ್ಕುಗಳಿಗಾಗಿ ಅನುದಾನಿತ ಶಾಲೆಗಳ ಶಿಕ್ಷಕರು ಅಲೆದಾಡುತ್ತಿದ್ದಾರೆ.
ಮಹಿಳಾ ಶಿಕ್ಷಕರಿಗೆ ಶಿಶುಪಾಲನಾ ರಜೆ ಮಂಜೂರಾತಿ, ಗಳಿಕೆ ರಜೆ ನಗದೀಕರಣಕ್ಕೆ ಇಂತಿಷ್ಟೇ ಹಣ ನೀಡಬೇಕು ಎಂಬ ಅಲಿಖಿತ ನಿಯಮ ತುಮಕೂರು ತಾಲೂಕಿನಲ್ಲಿ ಜಾರಿಯಾಗಿದೆ. ಹಣ ನೀಡಲು ನಿರಾಕರಿಸುವ ಶಿಕ್ಷಕರನ್ನು ಗುರಿಯಾಗಿಸಿಕೊಂಡು ಶಾಲೆಗಳಿಗೆ ದೀಢೀರ್ ಭೇಟಿ ನೀಡಿ ತೊಂದರೆ ನೀಡುವ ಪ್ರವೃತ್ತಿ ತಾಲೂಕಿನಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳುಗೆಡವಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಸಮಸ್ಯೆಗಳನ್ನು ಹೊತ್ತು ಬರುವ ಶಿಕ್ಷಕರಿಗೆ ಅವಮಾನಿಸಿ ಕಳುಹಿಸಲಾಗುತ್ತಿದೆ, ತಾತ್ಸಾರದಿಂದ ಬೇಕಾಬಿಟ್ಟಿ ಉತ್ತರ ನೀಡುವುದು ನಿರಂತರವಾಗಿ ನಡೆದಿದೆ. ಈ ಬಗ್ಗೆ ಸ್ಥಳಿಯ ಶಾಸಕರಿಗೂ ದೂರುಗಳು ಸಲ್ಲಿಕೆಯಾಗಿದ್ದು ಇತ್ತೀಚೆಗೆ ನಡೆದ ತಾಲೂಕು ಕೆಡಿಪಿ ಸಭೆಯಲ್ಲಿ ಇದನ್ನು ಪ್ರಸ್ತಾಪಿಸಿ ಅಧಿಕಾರಿಗಳಿಗೆ ನೀಡಿದ್ದ ಎಚ್ಚರಿಕೆಯೂ ಉಪಯೋಗವಾಗಿಲ್ಲ.
ಮಕ್ಕಳಿಲ್ಲದೆ ಸೊರಗುತ್ತಿರುವ ಶಾಲೆಗಳ ಮೇಲೆ ಪ್ರಹಾರ! ಖಾಸಗಿ ಶಾಲೆಗಳ ಪ್ರಭಾವದಿಂದ ತುಮಕೂರು ತಾಲೂಕಿನ ಅನುದಾನಿತ ಪ್ರೌಢಶಾಲೆಗಳಲ್ಲಿ ಮಕ್ಕಳ ಸಂಖ್ಯೆಯೂ ದಿನೇದಿನೇ ಕಡಿಮೆಯಾಗುತ್ತಿದ್ದು ಗತವೈಭವ ಕಣ್ಮರೆಯಾಗಿದೆ. ಶಾಲೆಗಳನ್ನು ಉಳಿಸಿಕೊಳ್ಳಲು ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಹರಸಾಹದ ಪಡುತ್ತಿರುವ ಸಂಕಷ್ಟದ ದಿನದಲ್ಲಿ ಶಿಕ್ಷಣೆ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ಶಾಲೆಗಳ ಭವಿಷ್ಯವನ್ನೇ ಮಂಕಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿಯೇ ತಾಲೂಕಿನ ಕಿತ್ತಗಾನಹಳ್ಳಿ ಹಾಗೂ ಬಳಗೆರೆಯಲ್ಲಿ ಎರಡು ಅನುದಾನಿತ ಪ್ರೌಢಶಾಲೆಗಳು ಮಕ್ಕಳಿಲ್ಲದೆ ಬಾಗಿಲು ಹಾಕಿದ್ದು ಮತ್ತಷ್ಟು ಶಾಲೆಗಳೂ ಇದೇ ಹಾದಿಯಲ್ಲಿವೆ. ಕಳೆದ 10 ವರ್ಷಗಳಿಂದಲೂನಿವೃತ್ತರಾದ ಶಿಕ್ಷಕ ಹುದ್ದೆಗಳ ಭರ್ತಿಗೆ ಸರ್ಕಾರ ಅನುಮತಿ ನೀಡಿಲ್ಲ, ಉಳಿದಿರುವ ಶಿಕ್ಷಕರೇ ಸ್ವಂತ ಹಣದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದಾರೆ, ಕೆಲವೆಡೆ ವಾಹನದ ವ್ಯವಸ್ಥೆ ಮಾಡಿಕೊಂಡು ಶಾಲೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕಿದ್ದ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಉದ್ದೇಶಪೂರ್ವಕ ಕಿರುಕುಳ ಶಿಕ್ಷಕ ವಲಯದ ನೆಮ್ಮದಿ ಕೆಡಿಸಿದೆ
ಜಾತಿಗಣತಿ ಪಟ್ಟಿಯಿಂದ ಬಿಡುಗಡೆಗೂ ಲಂಚ?
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಇತ್ತೀಚೆಗೆ ನಡೆಸಿದ ಸಾಮಾಜಿಕ, ಶೈಕ್ಷಣಿಕ ಎರಡನೇ ಹಂತದ ಸಮೀೆಗೆ ನಿಯೋಜಿಸಲಾಗಿದ್ದ ಶಿಕ್ಷಕರು, ಸಿಬ್ಬಂದಿಯನ್ನು ಕರ್ತವ್ಯದ ಪಟ್ಟಿಯಿಂದ ಕೈಬಿಡುವ ಅಧಿಕಾರ ಹೊಂದಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಪಕ್ಷಪಾತ ಮಾಡಿರುವ ಆರೋಪ ಶಿಕ್ಷಕರ ವಲಯದಿಂದಲೇ ಕೇಳಿಬರುತ್ತಿದೆ.
ಸಮೀೆಯಲ್ಲಿ ಭಾಗವಹಿಸಲು ಬಯಸದ ಶಿಕ್ಷಕರು ಹಣ ನೀಡಿ ಕರ್ತವ್ಯದಿಂದ ಬಿಡುಗಡೆ ಪಡೆದಿರುವ ಆರೋಪ ಕೂಡ ಕೇಳಿಬಂದಿದೆ, ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರೂ ಅಂತಹವರನ್ನು ಸೇವೆಯಿಂದ ಬಿಡುಗಡೆಗೊಳಿಸದೇ ಕಿರುಕುಳ ನೀಡಿರುವ ದೂರುಗಳಿಗೂ ಮೇಲಾಧಿಕಾರಿಗಳು ಸ್ಪಂದಿಸದಿರುವುದು ಶಿಕ್ಷಕರ ವಲಯದಲ್ಲಿ ನಿರಾಸೆ ಮೂಡಿಸಿದೆ.
ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ಸಿಬ್ಬಂದಿಗೆ 7ನೇ ವತನ ಆಯೋಗದ ಪರಿಷತ ವರದಿಯ ಬಾಕಿ ಬಿಲ್ ಬಿಡುಗಡೆಗೂ ಶಿಕ್ಷಕರಿಂದ ತಲಾ 600ರೂ. ವಸೂಲಿ ಮಾಡಿರುವ ವಿಷಯ ಗುಟ್ಟಾಗಿ ಉಳಿದಿಲ್ಲ, ಲಂಚದ ಹಣ ನೀಡಿದ್ದರೂ ಈವರೆಗೂ ಬಿಲ್ ಶಿಕ್ಷಕರ ಖಾತೆಗೆ ಜಮಾ ಮಾಡದೆ ಸತಾಯಿಸಲಾಗುತ್ತಿದೆ.