ವಿಶ್ವಾಸವೇ ಸಂಸ್ಥೆಯ ನಿಜವಾದ ಸಂಪತ್ತು: ಅವಧೂತ ಶ್ರೀ ವಿನಯ್ ಗುರೂಜಿ ಹೇಳಿಕೆ-Avadhoot Shri Vinay Guruji

ಅವಧೂತ  ಶ್ರೀ ವಿನಯ್ ಗುರೂಜಿ
ಅವಧೂತ ಶ್ರೀ ವಿನಯ್ ಗುರೂಜಿ
Published on
ಬೆಂಗಳೂರು: ಗುಣಮಟ್ಟ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವ ಅಳವಡಿಸಿಕೊಂಡರೆ ಯಾವುದೇ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯಲಿವೆ ಎಂದು ಅವಧೂತ ಶ್ರೀ ವಿನಯ್ ಗುರೂಜಿ ಹೇಳಿದ್ದಾರೆ.
ಆರ್.ಆರ್.ಗೋಲ್ಡ್ ಪ್ಯಾಲೇಸ್​​​ನ ನೂತನ ಮಳಿಗೆ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ವಿಶ್ವಾಸವೇ ಯಾವುದೇ ಸಂಸ್ಥೆಯ ನಿಜವಾದ ಸಂಪತ್ತು. ಈ ಸಂಸ್ಥೆಯ ಮೂಲಕ ಸಾವಿರಾರು ಕುಟುಂಬಗಳ ಬದುಕಿನಲ್ಲಿ ಸಂತೋಷ, ಸಮೃದ್ಧಿ ಹಾಗೂ ಶುಭ ನೆಲೆಸುವಂತಾಗಲಿ. ಸಂಸ್ಥೆಯ ಬೆಳವಣಿಗೆ ಸಮಾಜದ ಒಳಿತಿಗೂ ಕಾರಣವಾಗಲಿ" ಎಂದು ಹಾರೈಸಿದರು.
ನಟಿ ಸೋನಾಲ್ ಮೊಂತೆರೊ ಮಾತನಾಡಿ, "ಗುಣಮಟ್ಟ, ವಿಶ್ವಾಸ ಹಾಗೂ ಅತ್ಯುತ್ತಮ ಕರಕುಶಲತೆಗೆ ಹೆಸರಾದ ಆರ್. ಆರ್.ಗೋಲ್ಡ್ ಪ್ಯಾಲೇಸ್ ಗ್ರಾಹಕರ ಮನಸ್ಸಿನಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಾಸ, ಗುಣಮಟ್ಟ ಮತ್ತು ಗ್ರಾಹಕ ಸ್ನೇಹಿ ಸೇವೆಯ ಮೂಲಕ ಸಾವಿರಾರು ಕುಟುಂಬಗಳ ಮೆಚ್ಚುಗೆಗೆ ಪಾತ್ರವಾಗಿರುವ ಈ ಸಂಸ್ಥೆ ಇನ್ನಷ್ಟು ಯಶಸ್ಸಿನ ಶಿಖರಗಳನ್ನು ತಲುಪುವಂತಾಗಲಿ ಎಂದು ಲವ್ಲಿ ಸ್ಟಾರ್ ಪ್ರೇಮ್ ಶುಭಾ ಹಾರೈಸಿದರು. ಶಾಸಕ ರಿಜ್ವಾನ್ ಅರ್ಷದ್, ಸಂಸ್ಥೆಯ ಸಂಸ್ಥಾಪಕ ಆರ್​.ರಮೇಶ್​ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net