ರೋಗಿಗಳಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿ

ಯಾದಗಿರಿಯಲ್ಲಿ ಭಾನುವಾರ ರಾತ್ರಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸನ್ಮಾನಿಸಿದರು. ಡಾ.ಸಂಗಮ್ಮ, ಡಾ.ಸಿ.ಎಂ.ಪಾಟೀಲ್​, ಡಾ.ವೀರೇಶ ಜಾಕಾ, ಡಾ.ಭಗವಂತ ಅನವಾರ, ಡಾ.ಚಂದ್ರಶೇಖರ ಪೂಜಾರಿ ಇತರರಿದ್ದರು.
ಯಾದಗಿರಿಯಲ್ಲಿ ಭಾನುವಾರ ರಾತ್ರಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕ ವೈದ್ಯರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸನ್ಮಾನಿಸಿದರು. ಡಾ.ಸಂಗಮ್ಮ, ಡಾ.ಸಿ.ಎಂ.ಪಾಟೀಲ್​, ಡಾ.ವೀರೇಶ ಜಾಕಾ, ಡಾ.ಭಗವಂತ ಅನವಾರ, ಡಾ.ಚಂದ್ರಶೇಖರ ಪೂಜಾರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸಲಹೆ
  • ಯಾದಗಿರಿಯಲ್ಲಿ ವೈದ್ಯರ ದಿನಾಚರಣೆ
 ಯಾದಗಿರಿ: ವೈದ್ಯರು ಎಂದರೆ ಎರಡನೇ ದೇವರು ಎಂಬ ಭಾವನೆ ಜನರಲ್ಲಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಪ್ರೀತಿ ಮತ್ತು ವಿಶ್ವಾಸದಿಂದ ಕಂಡು ಮಾತಾಡಿಸಿದರೆ ಅವರ ಅರ್ಧ ರೋಗ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸ್ಪಂದಿಸುವ ಕೆಲಸ ವೈದ್ಯರು ಮಾಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಭಾರತೀಯ ವೈದ್ಯಕಿಯ ಸಂದ ಜಿಲ್ಲಾ ಘಟಕ ಭಾನುವಾರ ರಾತ್ರಿ ಇಲ್ಲಿನ ಎನ್​ವಿಎಂನಲ್ಲಿ ಹಮ್ಮಿಕೊಂಡ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದು ವೈದ್ಯಕಿಯ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅತ್ಯಾಧುನಿಕ ಉಪಕರಣಗಳು ಬಂದಿದ್ದು, ರೋಗ ಯಾವುದೇ ಇದ್ದರೂ ಗುಣಪಡಿಸುವ ಶಕ್ತಿ ವೈದ್ಯರಿಗಿದೆ. ಈ ನಿಟ್ಟಿನಲ್ಲಿ ರೋಗಿಗಳ ಬಗ್ಗೆ ಸ್ವಲ್ಪ ಗಮನ ಹರಿಸಿ ಚಿಕಿತ್ಸೆ ನೀಡಿದರೆ ಉಪಕಾರ ಮಾಡಿದಂತಾಗುತ್ತದೆ ಎಂದು ಹೇಳಿದರು.
ಇಂದು ವೈದ್ಯರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲೇ ಇದೆ. ಮುಂದೆ ಪ್ರತಿ ಮನೆಯಲ್ಲಿ ಒಬ್ಬ ವೈದ್ಯ ಸಿಗಬಹುದು, ಅದರಲ್ಲೂ ಮಹಿಳೆಯರು ಪುರುಷರಿಗಿಂತ ಬುದ್ದಿವಂತರಾಗಿದ್ದಾರೆ. ಅವರು ಗುರಿ ಮುಟ್ಟಲು ಕಠಿಣ ಪರಿಶ್ರಮ ಹಾಕುತ್ತಾರೆ. ಈ ನಿಟ್ಟಿನಲ್ಲಿ ಡಾ.ಸಂಗಮ್ಮ ಡಾ.ವೀರಬಸವಂತರಡ್ಡಿ ಮುದ್ನಾಳ ಅವರು ಹಿರಿಯ ವೈದ್ಯರಾಗಿದ್ದು, ಅವರು ಇಂದಿನ ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ. ಈ ಸಂ ಉತ್ತಮ ಕೆಲಸ ಮಾಡುತ್ತಿದ್ದು, ನಮ್ಮ ಸಹಕಾರ ಯಾವತ್ತು ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಚಂದ್ರಶೇಖರ ಪೂಜಾರಿ, ಸಂಘದ ವಾರ್ಷಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಅತಿಥಿಗಳಾಗಿ ಸಿರೋಗ ತೆ ಡಾ.ಸಂಗಮ್ಮ ಡಾ.ವೀರಬಸವಂತರೆಡ್ಡಿ ಮುದ್ನಾಳ ಮಾತನಾಡಿದರು. ಹಿರಿಯ ವೈದ್ಯ ಡಾ.ಸುಭಾಷ ಕರಣಗಿ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ.ಲಕ್ಷಿ ಪಾಟೀಲ್​ ಮಾತನಾಡಿದರು. 
ವೈದ್ಯ ಡಾ.ವೀರೇಶ ಜಾಕಾ ನಿರೂಪಿಸಿ, ಜಿಲ್ಲೆಯಲ್ಲಿ ವೈದ್ಯಕಿಯ ಸೌಲಭ್ಯ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ವೈದ್ಯರಾದ ಡಾ.ಭಗವಂತ ಅನವಾರ್​, ಡಾ.ಸಿ.ಎಂ.ಪಾಟೀಲ್​, ಡಾ.ಸುರೇಶರೆಡ್ಡಿ, ಡಾ.ಸುರೇಖಾ ಹಾಗೂ ಡಾ.ಶೈಲಜಾ ವರ್ಮಾ ಅವರನ್ನು ಸನ್ಮಾನಿಸಲಾಯಿತು. ಡಾ.ಪ್ರಶಾಂತ ಬಾಸುತಕರ್​ ಸೇರಿ ಇತರರಿದ್ದರು.
ಆರಂಭದಲ್ಲಿ ಡಾ.ಭಗವಂತ ಅನವಾರ ಅವರು ವೈದ್ಯರು ಮತ್ತು ರೋಗಿಗಳ ನಡುವೆ ನಡೆಯುವ ದೇಸಿ ಶೈಲಿಯ ಸಂಭಾಷಣೆ ಹಾಸ್ಯದ ಮೂಲಕ ಹೇಳಿ ಸಭಿಕರಿಗೆ ನಗೆಗಡಲಲ್ಲಿ ತೆಲಿಸಿದರು.
ಡಾ.ವೀರಬಸವಂತರಡ್ಡಿ ಅಂತ-ಕರಣದ ವ್ಯಕ್ತಿ
ಮಾಜಿ ಶಾಸಕ ಲಿಂ.ಡಾ.ವೀರಬಸವಂತರಡ್ಡಿ ಮುದ್ನಾಳ್​ ಮತ್ತು ನನ್ನ ಗೆಳೆತನ ಬಹಳ ಗಟ್ಟಿಯಾಗಿತ್ತು. ನಮ್ಮಿಬ್ಬರ ರಾಜಕೀಯ ಪಕ್ಷಗಳು ಬೇರೆಯಾಗಿದ್ದರೂ ಒಳ್ಳೆಯದು, ಕೆಟ್ಟದು ಏನೇ ಕ್ಷೇತ್ರದಲ್ಲಿ ನಡೆದರೂ ಇಬ್ಬರೂ ಸೇರಿಯೇ ಹೋಗಿ ಬರುತ್ತಿದ್ದೇವು. ಇದು ನೋಡಿದ ಅನೇಕರು, ಅಲ್ಲರಿ ಗೌಡರೇ ನೀವು ಕಾಂಗ್ರೆಸ್​, ಡಾಕ್ಟರ್​ ಸಾಹೇಬರು ಬಿಜೆಪಿ, ಆದರೂ ಬಹಳಷ್ಟು ಕಡೆ ಇಬ್ಬರು ಜೋಡಿಯಾಗಿ ಇರುತ್ತಿರಿಲ್ಲರಿ ಎಂದು ನನಗೆ ಕೇಳುತ್ತಿದ್ದರು. ಆಗ ರಾಜಕೀಯನೇ ಬೇರೆ, ಗೆಳೆತನವೇ ಬೇರೆ ಎಂದು ಹೇಳುತ್ತಿದೆ. ಮಾನವೀಯ ಅಂತ-ಕರಣದಿಂದ ಡಾ.ವೀರಬಸವಂತರಡ್ಡಿ ಅವರು ರೋಗಿಗಳ ಆರೈಕೆ ಮಾಡುತ್ತಿದ್ದರು ಎಂದು ಸ್ಮರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net