ಎತ್ತುಗಳಿಗೆ ಪೂಜ್ಯ ಭಾವನೆಯಿಂದ ಕಾಣಿ

ವಡಗೇರಾ  ತಾಲೂಕಿನ ಸುಕ್ಷೇತ್ರ ಕೃಷ್ಣಾವೇಣಿ&ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡ 112ನೇ ಶಿವಾನುಭವ ಚಿಂತನಾಗೋಷ್ಠಿಯನ್ನು ಶ್ರೀ ಕರುಣೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ವೇ.ಬನ್ನಯ್ಯ ಸ್ವಾಮಿ, ವೇ.ವೀರಭದ್ರಯ್ಯ ಸ್ವಾಮಿ, ಶಿವಯ್ಯ ಸ್ವಾಮಿ ಸಾತಕೇಡ, ಮಲ್ಲಿಕಾರ್ಜುನ ಸ್ವಾಮಿ ಅರಸಿಣಗಿ, ಚಂದ್ರಶೇಖರಗೌಡ ಗೋನಾಲ್​, ಶರಣಯ್ಯ ಸ್ವಾಮಿ, ಶಿವಕುಮಾರ ಇತರರಿದ್ದರು.
ವಡಗೇರಾ ತಾಲೂಕಿನ ಸುಕ್ಷೇತ್ರ ಕೃಷ್ಣಾವೇಣಿ&ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡ 112ನೇ ಶಿವಾನುಭವ ಚಿಂತನಾಗೋಷ್ಠಿಯನ್ನು ಶ್ರೀ ಕರುಣೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ವೇ.ಬನ್ನಯ್ಯ ಸ್ವಾಮಿ, ವೇ.ವೀರಭದ್ರಯ್ಯ ಸ್ವಾಮಿ, ಶಿವಯ್ಯ ಸ್ವಾಮಿ ಸಾತಕೇಡ, ಮಲ್ಲಿಕಾರ್ಜುನ ಸ್ವಾಮಿ ಅರಸಿಣಗಿ, ಚಂದ್ರಶೇಖರಗೌಡ ಗೋನಾಲ್​, ಶರಣಯ್ಯ ಸ್ವಾಮಿ, ಶಿವಕುಮಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕರುಣೇಶ್ವರ ಶಿವಾಚಾರ್ಯರು ಸಲಹೆ
  • ಸಂಗಮದಲ್ಲಿ 112ನೇ ಶಿವಾನುಭವಗೋಷ್ಠಿ
ವಡಗೇರಾ: ರೈತರ ಮಿತ್ರರಾಗಿ ಹಗಲು-ರಾತ್ರಿ ಕೃಷಿ ಕಾಯಕದಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಮಣ್ಣಿನಿಂದ ಎತ್ತುಗಳ ಪ್ರತಿಮೆ ತಯಾರಿಸಿ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿ ಕೃತತೆ ವ್ಯಕ್ತಪಡಿಸುವುದೇ ಮಣ್ಣೆತ್ತಿನ ಅಮಾವಾಸ್ಯೆಯ ವಿಶೇಷತೆಯಾಗಿದೆ ಎಂದು ಕೃಷ್ಣಾವೇಣಿ&ಭೀಮಾ ಸಂಗಮದ ಶ್ರೀ ಕರುಣೇಶ್ವರ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸುೇತ್ರ ಕೃಷ್ಣಾವೇಣಿ&ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಸೋಮವಾರ ಆಯೋಜಿಸಿದ್ದ 112ನೇ ಶಿವಾನುಭವ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೈತನು ಬಿತ್ತನೆ ಕಾರ್ಯ ಆರಂಭಿಸುವ ಮುನ್ನ ತನ್ನ ಕೃಷಿಗೆ ಆಧಾರಸ್ತಂಭವಾಗಿರುವ ಎತ್ತುಗಳನ್ನು ಆರಾಧಿಸಿ ಪೂಜಿಸುವ ಸಂಪ್ರದಾಯ ನಮ್ಮ ಗ್ರಾಮೀಣ ಸಂಸತಿಯ ವಿಶೇಷತೆಯಾಗಿದೆ. ಮಣ್ಣೆತ್ತಿನ ಅಮಾವಾಸ್ಯೆಯನ್ನು ಗ್ರಾಮೀಣ ಭಾಗದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿದರೆ ಉತ್ತಮ ಮಳೆ, ಸಮೃದ್ಧ ಬೆಳೆ, ಆರೋಗ್ಯ ಹಾಗೂ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಭಾರತೀಯ ಸಂಸತಿಯಲ್ಲಿ ಭೂಮಿ, ಗೊವು ಹಾಗೂ ಎತ್ತುಗಳಿಗೆ ಅತ್ಯಂತ ಮಹತ್ವದ ಸ್ಥಾನವಿದ್ದು, ಪ್ರತಿಯೊಬ್ಬರೂ ಅವುಗಳನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂದು ಹೇಳಿದರು.
ಗೋವು ಮತ್ತು ಎತ್ತುಗಳಿಗೆ ವಯಸ್ಸಾದ ಬಳಿಕ ಅವುಗಳನ್ನು ಕಸಾಯಿಖಾನೆಗಳಿಗೆ ಒಪ್ಪಿಸುವುದು ಮಹಾಪಾಪ. ಅವುಗಳ ಪೋಷಣೆ ಹಾಗೂ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ವೇದಮೂರ್ತಿ ಬನ್ನಯ್ಯ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇ.ವೀರಭದ್ರಯ್ಯ ಸ್ವಾಮಿ ದೇವಸೂಗೂರು, ಶಿವಯ್ಯ ಸ್ವಾಮಿ ಸಾತಕೇಡ, ಮಲ್ಲಿಕಾರ್ಜುನ ಸ್ವಾಮಿ ಅರಸಿಣಗಿ, ಚಂದ್ರಶೇಖರಗೌಡ ಗೋನಾಲ್​, ಶರಣಯ್ಯ ಸ್ವಾಮಿ, ಶಿವಕುಮಾರ್​, ಶರಣಪ್ಪ ವಿಶ್ವಕರ್ಮ, ಭೀಮರೆಡ್ಡಿ ರಂಗಾಪುರ, ಬಸವರಾಜ ಕಾಟರಪಲ್ಲಿ, ಸೈದಣ್ಣ ಶಿವಪುರ, ಹುಸೇನಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net