ಕೆಸರಿನ ರಸ್ತೆಯಲ್ಲಿ ಸಂಚಾರ ಕಷ್ಟ-ಕಷ್ಟ

ನಾಲವಾರ ವಲಯದ ಲಾಡ್ಲಾಪುರ&ಅಲಹಳ್ಳಿ ಮಧ್ಯದ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿರುವುದು.
ನಾಲವಾರ ವಲಯದ ಲಾಡ್ಲಾಪುರ&ಅಲಹಳ್ಳಿ ಮಧ್ಯದ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಲಾಡ್ಲಾಪುರ-ಆಲಹಳ್ಳಿ ರೋಡ್​ ಸಂಪೂರ್ಣ ಹಾಳು
  • ಆಡಳಿತ ವಿರುದ್ಧ ಸ್ಥಳಿಯರ ಆಕ್ರೋಶ
ನಾಲವಾರ: ಲಾಡ್ಲಾಪುರ ಗ್ರಾಮದಿಂದ ಅಲಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ತಗ್ಗು&ಗುಂಡಿಗಳ ಮಧ್ಯೆ ಪ್ರಾಯಾಸ ಪಟ್ಟು ಪ್ರಯಾಣಿಸುವ ಸ್ಥಿತಿ ನಿರ್ಮಾಣವಾಗಿದೆ.
ಲಾಡ್ಲಾಪುರದಿಂದ ಅಲಹಳ್ಳಿ ಸುಮಾರು 3 ಕಿಮೀ ದೂರದಲ್ಲಿದ್ದು, ಪೂರ್ಣ ರೋಡ್​ ಕಿತ್ತು ಹೋಗಿದೆ. ಕನಿಷ್ಠ ಪಾದಾಚಾರಿಗಳು ನಡೆದುಕೊಂಡು ಓಡಾಡದಂತ ಸ್ಥಿತಿ ಇದೆ. ಈ ರಸ್ತೆಯಲ್ಲಿ 2021ರಲ್ಲಿ ರಾಷ್ಟ್ರೀಯ ಹೆದ್ದಾರಿಯ ಹೆಚ್ಚುವರಿ ಅನುದಾನದಲ್ಲಿ ನಿರ್ಮಿಸಲಾಗಿತ್ತು. ನಿರ್ಮಾಣವಾದ ವರ್ಷದಲ್ಲಿಯೇ ಕಿತ್ತು ಹೋಗಿದ್ದು, ಕಳೆದ 4 ವರ್ಷಗಳಿಂದ ಹಾಳಾಗಿರುವ ರೋಡಿನಲ್ಲಿ ಜನರು ತಿರುಗಾಟ ನಡೆಸುತ್ತಿದ್ದಾರೆ.
ನಿತ್ಯವೂ ಶಾಲಾ ಮಕ್ಕಳು, ಗ್ರಾಮಸ್ಥರು ಭಯದಲ್ಲಿಯೇ ಸಂಚರಿಸುವಂತಾಗಿದೆ. ಬೇಸಿಗೆಯಲ್ಲಿ ಧೂಳುಮಯವಾದರೆ, ಮಳೆಗಾಲದಲ್ಲಿ ಕೆಸರು ಗದ್ದೆಯಂತಾಗುತ್ತದೆ. ದ್ವಿಚಕ್ರ ಹಾಗೂ ಸಣ್ಣ ವಾಹನಗಳ ಚಾಲಕರನ್ನು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತ ಸ್ಥಿತಿ ಇದೆ. ಮಳೆಗಾಲದಲ್ಲಿ ಕೆಸರಿನ ರಸ್ತೆ ಮೇಲೆ ಸಂಚರಿಸುವಾಗ ವಾಹನಗಳು ರೋಡ್​ ಬಿಟ್ಟು ಪಕ್ಕದ ಜಮೀನಿಗೆ ಇಳಿದ ಉದಾಹರಣೆ ಸಾಕಷ್ಟಿವೆ.
ಸುಸಜ್ಜಿತ ರಸ್ತೆ ನಿರ್ಮಾಣಕ್ಕಾಗಿ ಗ್ರಾಮಸ್ಥರು ಕ್ಷೇತ್ರದ ಶಾಸಕರೂ ಆಗಿರುವ ಗೃಹ ಸಚಿವ ಪ್ರಿಯಾಂಕ್​ ರ್ಖಗೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸುಗಮ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಒಕ್ಕೊರಲ ಒತ್ತಾಯವಾಗಿದೆ.
"

ಲಾಡ್ಲಾಪುರ-ಅಲಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟು, ರಸ್ತೆಯೂದ್ದಕ್ಕೂ ದೊಡ್ಡ- ದೊಡ್ಡ ತಗ್ಗುಗಳು ಬಿದ್ದಿವೆ. ಮಳೆ ಬಂದಾಗ ಕೆಸರಿನ ರಸ್ತೆಯಲ್ಲಿ ಓಡಾಡುವದು ಕಷ್ಟವಾಗಿದೆ. ಹಲವಾರು ಬಾರಿ ಜಾರಿ ಬಿದ್ದ ಉದಾಹರಣೆಗಳಿವೆ. ಕೂಡಲೇ ಅಧಿಕಾರಿಗಳು ಗಮನಹರಿಸಿ ರಸ್ತೆ ದುರಸ್ತಿಗೆ ಮುಂದಾಗಬೇಕು.

— > ಶ್ಯಾಮಸುಂದರ ರೆಡಸನ್​, ಸ್ಥಳಿಯ ನಿವಾಸಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net