ಬಡ ರೈತನ ಜಮೀನಿನಿಂದ ಮುರಂ ಸಾಗಣೆ

ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮುರಂ ಸಾಗಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪಹಣಿಯಲ್ಲಿ ಹೆಸರು ಸೇರ್ಪಡೆ ಮಾಡಲು ಆದೇಶ ಮಾಡುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಗಣೇಶ್​ ದುಪ್ಪಲ್ಲಿ, ಮಲ್ಲು ಬೆಳಗೇರಾ, ಯೇಸು ಮೇಲಗಿರಿ, ಶಿವಶರಣ, ಹಿರಿಯ ಮುಖಂಡ ಮಲ್ಲಪ್ಪ ಅಭಿಶಾಳ ಇತರರಿದ್ದರು.
ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮುರಂ ಸಾಗಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪಹಣಿಯಲ್ಲಿ ಹೆಸರು ಸೇರ್ಪಡೆ ಮಾಡಲು ಆದೇಶ ಮಾಡುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು. ಗಣೇಶ್​ ದುಪ್ಪಲ್ಲಿ, ಮಲ್ಲು ಬೆಳಗೇರಾ, ಯೇಸು ಮೇಲಗಿರಿ, ಶಿವಶರಣ, ಹಿರಿಯ ಮುಖಂಡ ಮಲ್ಲಪ್ಪ ಅಭಿಶಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷ ದುಪ್ಪಲ್ಲಿ ಆರೋಪ >
  • ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ಡಿಸಿಗೆ ಮನವಿ
ಯಾದಗಿರಿ: ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸ.ನಂ. 125/01ರಲ್ಲಿ ಸರ್ಕಾರದಿಂದ ಭೂ ಮಂಜೂರಿಯಾಗಿ, ಹಕ್ಕು ಪತ್ರ ನೀಡಿದ್ದು, ಸಾಗುವಳಿಗೆ ಅಡ್ಡಿಪಡಿಸಿ ಅಕ್ರಮವಾಗಿ ಮುರಂ ಸಾಗಣೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಪಹಣಿಯಲ್ಲಿ ಹೆಸರು ಸೇರ್ಪಡೆ ಮಾಡಲು ಆದೇಶ ಮಾಡುವಂತೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯ ಗಣೇಶ್​ ದುಪ್ಪಲ್ಲಿ ನೇತೃತ್ವದಲ್ಲಿ ಸೋಮವಾರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ದುಪ್ಪಲ್ಲಿ, ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಸ.ನಂ.125/1 ರಲ್ಲಿ 8 ಎಕರೆ 17ಗುಂಟೆ ಹಣಮಂತ ಬಾಲಪ್ಪ ಎಂಬ ಬಡ ದಲಿತ ಮಾದಿಗ ಇವರಿಗೆ ಸರ್ಕಾರ ಭೂ ಮಂಜೂರಿ ಮಾಡಿದ್ದು, ಇವರಿಗೆ 20.5/76&77 2:15&01&1977 ರಂದು ಭೂಮಿ ಮಂಜೂರಿ ಮಾಡಿ, ಹಕ್ಕು ಪತ್ರ ನೀಡಿದ್ದು, ಪ್ರಸ್ತುತ ಇವರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇವರು ಅನರಸ್ಥರಿದ್ದ ಕಾರಣ ಪಹಣಿಯಲ್ಲಿ ಹೆಸರು ಸೇರ್ಪಡೆಯಾಗಿರುವುದಿಲ್ಲ. ಮೂಲ ಪಟ್ಟೇದಾರ ಮೃತಪಟ್ಟಿರುತ್ತಾರೆ. ಇವರ ಮೊಮ್ಮಗನಾದ ಶಿವಶರಣಪ್ಪ ಬಾಲಪ್ಪ ಇವರ ಹೆಸರಿಗೆ ಪಹಣಿ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.'
ಇದೇ ಸ.ನಂ. 125/4, 125/2ರಲ್ಲಿ ಬೇರೆಯವರ ಹೆಸರಿಗೆ ಪಹಣಿ ಆಗಿದ್ದು, ಆದರೆ ಈ ಬಡ ಮಾದಿಗ ರೈತನ ಹೆಸರು ಪಹಣಿಯಲ್ಲಿ ಸೇರಿಸದೇ ಅಧಿಕಾರಿಗಳು ವಿಳಂಭ ನೀತಿ, ದಿವ್ಯ ರ್ನಿಲ್ಯ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸದ್ಯ ಈ ಜಮೀನಿನಲ್ಲಿ ಗುಂಡಾಗಿರಿಯಿಂದ ಅಕ್ರಮವಾಗಿ ಮುರಂ ಮಣ್ಣು ಸಾಗಣೆ ಮಾಡಿ, ಅಕ್ರಮ ದಂಧೆ ನಡೆಸಿ, ದಲಿತರ ವಿರುದ್ಧ ದೌರ್ಜನ್ಯ ಮಾಡುತ್ತಿದ್ದು, ಅಕ್ರಮ ಮುರಂ ಸಾಗಣೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಬಡ ದಲಿತ ಮಾದಿಗ ರೈತನಿಗೆ ನ್ಯಾಯ ಒದಗಿಸಿ, ಸಾಗುವಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯ ಕಾಶಪ್ಪ ಮಾದಿಗ ಹೆಗ್ಗಣಗೇರಾ ಮಾತನಾಡಿ, ಸಮಾಜದಲ್ಲಿ ದಲಿತರ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಿದ್ದು ಪ್ರಸ್ತುತ ದಲಿತ ಹಣಮಂತ ಅವರಿಗೆ ಸೇರಿದ್ದ ಭೂಮಿಯನ್ನು ಅಧಿಕಾರಿ ವೃಂದ ಅವರಿಗೆ ನೀಡಬೇಕು, ಒಂದು ವೇಳೆ ರ್ನಿಲ ವಹಿಸಿದರೆ ಮುಂದಿನ ದಿನಮಾನಗಳಲ್ಲಿ ಹೋರಾಟ ಅನಿವಾರ್ಯ ಎಂದರು.ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಮುಂಡರಗಿ, ಜಿಲ್ಲಾ ಉಪಾಧ್ಯ ಮಲ್ಲು ಬೆಳಗೇರಾ, ಯೇಸು ಮೇಲಗಿರಿ, ಶಿವಶರಣ, ಹಿರಿಯ ಮುಖಂಡ ಮಲ್ಲಪ್ಪ ಅಭಿಶಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net