ಗೋಗಿ ಠಾಣೆ ವ್ಯಾಪ್ತಿಯಲ್ಲೂ ಸಹ ಅಕ್ರಮ ಚಟುವಟಿಕೆಗಳಿಗೆ ಅಲ್ಲಿನ ಪೊಲೀಸರು ಸಾಥ್ ನೀಡುತ್ತಿದ್ದಾರೆ. ಕಾರಣ ಈ ಕೂಡಲೇ ಇವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಶಿವಸೇನಾ ಪಕ್ಷದ ಪದಾಧಿಕಾರಿಗಳೊಂದಿಗೆ ತೆರಳಿ ಎಸ್ಪಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಪಕ್ಷದ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ್, ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಕೊಡಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಾಂಕ ನಾಯಕ, ಉಪಾಧ್ಯಕ್ಷ ಬಸನಗೌಡ ಕನ್ಯಾಕೋಳೂರ, ಮುಖಂಡರಾದ ಹಣಮಂತರಾಯ ಪಾಟೀಲ್ ಅರುಣ ಕಡ್ಡಿ, ವಿದ್ಯಾನಂದ ಸ್ವಾಮಿ, ಸುಭಾಷ ದೇವದುರ್ಗ ಲಿಂಗಾ ಅಂಬಿಗೇರ ಸೇರಿದಂತೆಯೇ ಇತರರಿದ್ದರು.