ಸಮರ್ಪಕ ಅನುಷ್ಠಾನಕ್ಕೆ ತರಬೇತಿ ಅವಶ್ಯಕ

ಕಲಬುರಗಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ರಾಜಕುಮಾರ ರಾಠೋಡ, ಮುರುಗೇಶ ಗುಣಾರಿ, ಶಿವಶರಣಪ್ಪ, ಅಬೇದ್​ ಅಹ್ಮದ್​, ರಾಹುಲ್​ ಮಹಾದೇವ, ಅಡಿವೆಪ್ಪಗೌಡ ಹಾದಿಮನಿ ಇತರರಿದ್ದರು.
ಕಲಬುರಗಿ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ರಾಜಕುಮಾರ ರಾಠೋಡ, ಮುರುಗೇಶ ಗುಣಾರಿ, ಶಿವಶರಣಪ್ಪ, ಅಬೇದ್​ ಅಹ್ಮದ್​, ರಾಹುಲ್​ ಮಹಾದೇವ, ಅಡಿವೆಪ್ಪಗೌಡ ಹಾದಿಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಕುಮಾರ ರಾಠೋಡ್​ ಅನಿಸಿಕೆ
  • ಪ್ರಧಾನಮಂತ್ರಿ ಮಾತೃವಂದನ ಯೋಜನೆ
ಕಲಬುರಗಿ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂ ಪ್ರಧಾನಮಂತ್ರಿ ಮಾತೃವಂದನ ಯೋಜನೆ ಸಮರ್ಪಕ ಅನುಷ್ಟಾನಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ಅಗತ್ಯವಿದ್ದು, ಶಿಬಿರಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಕುಮಾರ ರಾಠೋಡ್​ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಹಯೋಗದಡಿ ಇತ್ತೀಚೆಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮುರುಗೇಶ ಗುಣಾರಿ ಮಾತನಾಡಿ, ಪ್ರಧಾನಮಂತ್ರಿ ಮಾತೃವಂದನ ಯೋಜನೆಯಡಿ ಅನೇಕ ತಾಂತ್ರಿಕ ಸಮಸ್ಯೆಗಳಿದ್ದು, ಈ ಕುರಿತು ತರಬೇತಿ ಅವಧಿಯಲ್ಲಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಇಲಾಖೆ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ ಮಾತನಾಡಿ, ರಾಜ್ಯ ಮಟ್ಟದಲ್ಲಿ ಜಿಲ್ಲೆಯಿಂದ ಆಯ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ಮಾಸ್ಟರ್​ ಟ್ರೇನರ್ಸ್​ ತರಬೇತಿ ನೀಡಲಾಗಿತ್ತು. ಈಗ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲು ಬಂದಿರುವುದರಿಂದ ಖಂಡಿತ ಪರಿಣಾಮಕಾರಿಯಾಗಿದೆ ಎಂದು ಹೇಳಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಐಪಿಇ ಗ್ಲೋಬಲ್​ ಸಂಸ್ಥೆ ಸ್ಟೇಟ್​ ಪ್ರೋಗ್ರಾಮ್​ ಮ್ಯಾನೇಜರ್​ ಆಬೇದ್​ ಅಹ್ಮದ್​, ಪಿಎಂಎಂವಿವೈ ಸ್ಪೆಷಾಲಿಸ್ಟ್​ ರಾಹುಲ್​ ಮಹಾದೇವ, ಟೆನಿಂಗ್​ ಆ್ಯಂಡ್​ ಕಮ್ಯುನಿಕೇಷನ್ಸ್​ ಎಕ್ಸ್​ಪರ್ಟ್​ ಅಡಿವೆಪ್ಪಗೌಡ ಹಾದಿಮನಿ ಇತರರಿದ್ದರು. ಜಿಲ್ಲಾ ಮಿಷನ್​ ಸಂಯೋಜಕಿ ವಿಜಯಲಕ್ಷ್ಮಿ ಮೇಳಕುಂದಿ ನಿರೂಪಣೆ ಮಾಡಿದರು. ಯಲ್ಲಪ್ಪ ಸ್ವಾಗತಿಸಿದರು. ಮಹಬೂಬ್​ ಕುಕನೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net