ಬೆಂಗಳೂರು: ಆ ಮುಗ್ಧ ಕಂದಮ್ಮಗಳಿಗೆ ತಾವು ಆಟವಾಡುತ್ತಿದ್ದ ಜಾಗವೇ ತಮಗೆ ಮೃತ್ಯುಕೂಪವಾಗುತ್ತದೆ ಎಂಬ ಕನಿಷ್ಠ ಅರಿವೂ ಇರಲಿಲ್ಲ. ಸಂಜೆಯ ತಂಪಾದ ವಾತಾವರಣದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಾ, ನಗುಮೊಗದಿಂದ ಓಡಾಡುತ್ತಿದ್ದ ಆ ಹಸುಗೂಸುಗಳ ಕಲರವ ಕೆಲವೇ ಕ್ಷಣಗಳಲ್ಲಿ ಆಕ್ರಂದನವಾಗಿ ಮಾರ್ಪಟ್ಟಿದೆ. ತಂದೆ-ತಾಯಿಯ ಮುದ್ದಿನ ಕಣ್ಮಣಿಯಾಗಿದ್ದ ಐದು ವರ್ಷದ ಆ ಮಗು, ಇನ್ನು ಎಂದಿಗೂ ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದೆ. ಬಿರುಕು ಬಿಟ್ಟಿದ್ದ ಕಾಂಪೌಂಡ್ ಗೋಡೆಯ ( Compound Wall Collapses ) ರೂಪದಲ್ಲಿ ಬಂದ ಕ್ರೂರ ವಿಧಿ, ಆಟವಾಡುತ್ತಿದ್ದ ಕಂದನನನ್ನು ಬಲಿ ಪಡೆದಿದ್ದು, ಹೆತ್ತವರ ಒಡಲಲ್ಲಿ ಎಂದಿಗೂ ಆರದ ದುಃಖವನ್ನು ತುಂಬಿದೆ.