ಬ್ಲಾಕ್​ಬಸ್ಟರ್​ ಧುರಂಧರ್​ ಚಿತ್ರದ ಸ್ಕ್ರಿಪ್ಟ್​ ಪ್ರಧಾನಿ ಕಚೇರಿಯಿಂದ ಬಂದಿದ್ದಾ? ರಾಕೇಶ್​ ಬೇಡಿ ಕೊಟ್ಟ ಉತ್ತರ ವೈರಲ್​...Dhurandhar

ಬ್ಲಾಕ್​ಬಸ್ಟರ್​ ಧುರಂಧರ್​ ಚಿತ್ರದ ಸ್ಕ್ರಿಪ್ಟ್​ ಪ್ರಧಾನಿ ಕಚೇರಿಯಿಂದ ಬಂದಿದ್ದಾ? ರಾಕೇಶ್​ ಬೇಡಿ ಕೊಟ್ಟ ಉತ್ತರ ವೈರಲ್​...Dhurandhar
ಬ್ಲಾಕ್​ಬಸ್ಟರ್​ ಧುರಂಧರ್​ ಚಿತ್ರದ ಸ್ಕ್ರಿಪ್ಟ್​ ಪ್ರಧಾನಿ ಕಚೇರಿಯಿಂದ ಬಂದಿದ್ದಾ? ರಾಕೇಶ್​ ಬೇಡಿ ಕೊಟ್ಟ ಉತ್ತರ ವೈರಲ್​...Dhurandhar
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ನಟ ರಾಕೇಶ್ ಬೇಡಿ ಅವರು 'ಧುರಂಧರ್' ಚಿತ್ರದ ಸುತ್ತ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ
  • ಸಿನಿಮಾದ ಚಿತ್ರಕಥೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಬಂದಿದೆ ಎಂಬ ವಾದಗಳನ್ನು ನಿರಾಕರಿಸಿದ್ದಾರೆ
  • ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಕೆಲ ಜನರು ಇಂತಹ ವದಂತಿಗಳನ್ನು ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ
Dhurandhar : ಹಿರಿಯ ನಟ ರಾಕೇಶ್ ಬೇಡಿ ಅವರು 'ಧುರಂಧರ್' ಚಿತ್ರದ ಸುತ್ತ ಹರಿದಾಡುತ್ತಿದ್ದ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದು, ಈ ಬ್ಲಾಕ್‌ಬಸ್ಟರ್ ಸಿನಿಮಾದ ಚಿತ್ರಕಥೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ (PMO) ಬಂದಿದೆ ಎಂಬ ವಾದಗಳನ್ನು ಬಲವಾಗಿ ನಿರಾಕರಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸಿನಿಮಾ ಭರ್ಜರಿ ಯಶಸ್ಸು ಗಳಿಸಿದ ಬಳಿಕ ಕೆಲ ಜನರು ಇಂತಹ ವದಂತಿಗಳನ್ನು ಹರಿಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬುಧವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಕೇಶ್ ಬೇಡಿ, ಧುರಂಧರ್​ ಸಿನಿಮಾದ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.
ನಾನು ಚಿತ್ರಕಥೆಯನ್ನು ಎರಡು-ಮೂರು ಬಾರಿ ಓದಿದಾಗ, ಇದು ಕೇವಲ ಗಂಭೀರವಾದದ್ದಲ್ಲ, ಬದಲಿಗೆ ಅತ್ಯಂತ ತೀವ್ರವಾದ ಕಥಾಹಂದರ ಹೊಂದಿರುವ ಚಿತ್ರ ಎಂಬುದು ನನಗರ್ಥವಾಯಿತು. ಒಬ್ಬ ನಟನಾಗಿ ನನ್ನ ಒಲವು ಸಹಜವಾಗಿಯೇ ಹಾಸ್ಯದ ಕಡೆಗಿರುವುದರಿಂದ, ಕಥೆಯ ಮಧ್ಯೆ ಒಂದಿಷ್ಟು ಕಾಮಿಡಿ ದೃಶ್ಯಗಳನ್ನು ಸೇರಿಸಲು ಇರುವ ಅವಕಾಶಗಳು ನನಗೆ ಕಂಡವು. ತಕ್ಷಣ ನಾನು ನಿರ್ದೇಶಕ ಆದಿತ್ಯ ಅವರಿಗೆ, ಚಿತ್ರದ ಕೆಲವು ಭಾಗಗಳಲ್ಲಿ ಹಾಸ್ಯವನ್ನು ಅಳವಡಿಸಲು ನನಗೆ ಅವಕಾಶ ಕಾಣಿಸುತ್ತಿದೆ, ಒಮ್ಮೆ ಪ್ರಯತ್ನಿಸಲೆ? ಎಂದು ಕೇಳಿದೆ. ಅದಕ್ಕೆ ಅವರು, ರಾಕೇಶ್ ಜೀ, ಸದ್ಯಕ್ಕೆ ಏನೂ ಹೇಳಲಾಗುವುದಿಲ್ಲ, ಚಿತ್ರೀಕರಣ ಸಾಗುತ್ತಿದ್ದಂತೆ ಪರಿಸ್ಥಿತಿಗೆ ತಕ್ಕಂತೆ ನೋಡೋಣ ಎಂದು ಆರಂಭದಲ್ಲಿ ಸ್ವಲ್ಪ ಹಿಂಜರಿದರು. ಆದರೆ, ಕೆಲಸ ಮುಂದುವರಿದಂತೆ ಅವರಿಗೂ ಮತ್ತು ನನಗೂ ಅದು ತುಂಬಾ ಇಷ್ಟವಾಗುತ್ತಾ ಹೋಯಿತು ಎಂದು ಹಂಚಿಕೊಂಡಿದ್ದಾರೆ.
ಸಿನಿಮಾದ ದೃಶ್ಯವೊಂದರಲ್ಲಿ ಬಾತುಕೋಳಿಗಳ ಹಿಂಡನ್ನು ನೋಡಿ ಹೇಳುವ ತಮ್ಮದೇ ಆದ ಯುವರ್ ಬಕ್ಸ್ ಆರ್ ವೆರಿ ವೈಟ್ ಎಂಬ ಜನಪ್ರಿಯ ಡೈಲಾಗ್ ಅನ್ನು ನೆನಪಿಸಿಕೊಂಡ ರಾಕೇಶ್​ ಬೇಡಿ, ಇದೇ ಸಾಲನ್ನು ಬಳಸಿ ಚಿತ್ರಕಥೆಯ ವದಂತಿಗಳ ಬಗ್ಗೆ ಮಾತನಾಡಿದರು. ಈ ರೀತಿಯ ಡೈಲಾಗ್ ಅನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಸಿನಿಮಾ ಹಿಟ್ ಆದಾಗ ಕೆಲವು ಜನರು ಇದರ ಸ್ಕ್ರಿಪ್ಟ್ ಪಿಎಂಒನಿಂದ ಬರೆಯಲ್ಪಟ್ಟಿದೆ ಎಂದರು. ಆಗ ನಾನು, ಹಾಗಾದರೆ ಇಂತಹ ಡೈಲಾಗ್ ಬರೆಯಬಲ್ಲ ಯಾವ ವ್ಯಕ್ತಿ ಪಿಎಂಒನಲ್ಲಿ ಇದ್ದಾರೆ ಎಂದು ನನಗೆ ತಿಳಿಸಿ? ಇಂತಹದ್ದನ್ನು ಕಲ್ಪಿಸಿಕೊಳ್ಳಲು ಸಹ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದೆ ಎಂದರು.
ಹಳೆಯ ಕಾಲದ ಸಿನಿಮಾ ಪ್ರಚಾರ ಹಾಗೂ ಇಂದಿನ ಡಿಜಿಟಲ್ ಯುಗದ ತಂತ್ರಜ್ಞಾನವನ್ನು ಹೋಲಿಸಿ ಮಾತನಾಡಿದ ನಟ ರಾಕೇಶ್ ಬೇಡಿ, ಪ್ರೇಕ್ಷಕರ ಪ್ರೀತಿ ಮತ್ತು ಮೆಚ್ಚುಗೆ ಹಿಂದೆಯೂ ಇತ್ತು, ಆದರೆ ಅಂದಿನ ಕಾಲದಲ್ಲಿ ಸಿನಿಮಾಗಳು ಬಿಡುಗಡೆಯಾಗುವಾಗ ರಸ್ತೆ ಬದಿಯ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಲಾಗುತ್ತಿತ್ತು. ಅದನ್ನು ನೋಡಿಯೇ ಜನರಿಗೆ ಸಿನಿಮಾ ಬರುತ್ತಿರುವ ವಿಷಯ ತಿಳಿಯುತ್ತಿತ್ತು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ, ಕೇವಲ ಒಂದು ಬಟನ್ ಒತ್ತುವ ಮೂಲಕ ಒಂದೇ ಸೆಕೆಂಡ್‌ನಲ್ಲಿ ಕೋಟ್ಯಂತರ ಜನರಿಗೆ ಸಿನಿಮಾ ಬಿಡುಗಡೆಯಾಗುತ್ತಿರುವ ಮಾಹಿತಿ ತಲುಪುತ್ತದೆ ಎಂದಿದ್ದಾರೆ.
ಧುರಂಧರ್ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸಿನ ಬಗ್ಗೆ ಮುಂದುವರಿದು ಮಾತನಾಡಿದ ಅವರು, ಧುರಂಧರ್ ಸಿನಿಮಾ ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಬಿಡುಗಡೆಯಾಗಿದೆ. ಇನ್‌ಸ್ಟಾಗ್ರಾಮ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಕಾರಣದಿಂದಾಗಿ ಸಿನಿಮಾದ ತಲುಪಿರುವುದು ಮತ್ತು ಪ್ರಚಾರದ ರೀತಿ ಬೃಹತ್ ಮಟ್ಟದಲ್ಲಿ ಬೆಳೆದಿದೆ. ಇದರ ಪರಿಣಾಮವಾಗಿ, ಇಡೀ ಪ್ರಪಂಚದಾದ್ಯಂತ ಇರುವ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆ ಮತ್ತು ಪ್ರೀತಿ ಈಗ ಹಲವು ಪಟ್ಟು ಹೆಚ್ಚಾಗಿದೆ ಎಂದು ರಾಕೇಶ್​ ಬೇಡಿ ತಿಳಿಸಿದ್ದಾರೆ.
ಅಂದಹಾಗೆ, ಆದಿತ್ಯ ಧರ್ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಗೂ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಧುರಂಧರ್, ಬಾಕ್ಸ್ ಆಫೀಸ್ ಗಳಿಕೆ ಮತ್ತು ಸಾರ್ವಜನಿಕ ಚರ್ಚೆ ಎರಡರಲ್ಲೂ ಸಖತ್ ಸದ್ದು ಮಾಡುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ಹಿಂದಿ ಚಲನಚಿತ್ರ ಫ್ರಾಂಚೈಸಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ, ಹಿರಿಯ ನಟ ರಾಕೇಶ್ ಬೇಡಿ ಅವರು ಈ 'ಧುರಂಧರ್' ಸರಣಿಯ ಹೊರತಾಗಿ, ಕೊನೆಯದಾಗಿ ನಿರ್ದೇಶಕ ಡೇವಿಡ್ ಧವನ್ ಅವರ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net