ದಿನಬೆಳಗಾದ್ರೆ ಮೀಮ್ಸ್‌ನಲ್ಲಿ ಕಾಣಸಿಗುವ ಆ ನಗುವಿನ ರಾಜ ಈಗ ಹೇಗಿದ್ದಾನೆ?ಗುರುತೇ ಹಿಡಿಯದಷ್ಟು ಬದಲಾದ ನಬಿಲ್! Viral Meme Star Nabil Sebti

ದಿನಬೆಳಗಾದ್ರೆ ಮೀಮ್ಸ್‌ನಲ್ಲಿ ಕಾಣಸಿಗುವ ಆ ನಗುವಿನ ರಾಜ ಈಗ ಹೇಗಿದ್ದಾನೆ?ಗುರುತೇ ಹಿಡಿಯದಷ್ಟು ಬದಲಾದ ನಬಿಲ್! Viral Meme Star Nabil Sebti
ದಿನಬೆಳಗಾದ್ರೆ ಮೀಮ್ಸ್‌ನಲ್ಲಿ ಕಾಣಸಿಗುವ ಆ ನಗುವಿನ ರಾಜ ಈಗ ಹೇಗಿದ್ದಾನೆ?ಗುರುತೇ ಹಿಡಿಯದಷ್ಟು ಬದಲಾದ ನಬಿಲ್! Viral Meme Star Nabil Sebti
Published on

ಪ್ರಮುಖ ಮುಖ್ಯಾಂಶಗಳು

  • ಜಗತ್ತನ್ನೇ ನಗಿಸಿದ್ದ ಆ "ವೈರಲ್ ಮೀಮ್ ಬಾಯ್" ಈಗ ಹೇಗಿದ್ದಾನೆ ಗೊತ್ತಾ?
  • ಗುರುತೇ ಹಿಡಿಯದಷ್ಟು ಬದಲಾದ ಜಗತ್ತಿನ ಫೇಮಸ್ "ಟ್ರೋಲ್ ಹುಡುಗ
  • ತನ್ನದೇ ಹಳೆಯ ವೈರಲ್ ಫೋಟೋ ಹಿಡಿದು ಫಿಫಾ ವಿಶ್ವಕಪ್ ಕ್ರೀಡಾಂಗಣಕ್ಕೆ ಎಂಟ್ರಿ ಕೊಟ್ಟ ನಬಿಲ್ ಸೆಬ್ತಿ
  • ಕ್ರೀಡಾಂಗಣದಲ್ಲಿ ತನ್ನದೇ ಮುಖದ ಬೃಹತ್ ಪೋಸ್ಟರ್ ಪ್ರದರ್ಶಿಸಿದ 'ಅರಬ್ ಐಡಲ್' ಸ್ಟಾರ್
Viral Meme Star Nabil Sebti : ಯಾವುದೇ ಮುನ್ಸೂಚನೆ ಇಲ್ಲದೆ, ಆಕಸ್ಮಿಕವಾಗಿ ಇಂಟರ್ನೆಟ್ ಲೋಕಕ್ಕೆ ಎಂಟ್ರಿ ಕೊಟ್ಟು ರಾತ್ರೋರಾತ್ರಿ ಜಾಗತಿಕ ಮಟ್ಟದಲ್ಲಿ ಸೆಲೆಬ್ರಿಟಿಯಾದವರು ಎಷ್ಟೋ ಜನರಿದ್ದಾರೆ. ಅದರಲ್ಲಿಯೂ ಸೋಶಿಯಲ್ ಮೀಡಿಯಾದಲ್ಲಿ ದಿನಬೆಳಗಾದರೆ ಕಾಣಸಿಗುವ ಮೀಮ್ಸ್ ಮತ್ತು ಟ್ರೋಲ್‌ಗಳಲ್ಲಿ ಜಗತ್ತಿನಾದ್ಯಂತ ಕೋಟ್ಯಂತರ ನೆಟ್ಟಿಗರ ಮುಖದಲ್ಲಿ ನಗು ಮೂಡಿಸಿದ್ದ ಆ "ವೈರಲ್ ಹುಡುಗ" ಈಗ ಎಲ್ಲಿದ್ದಾನೆ, ಹೇಗಿದ್ದಾನೆ ಗೊತ್ತಾ? ಕಾಲ ಉರುಳಿದಂತೆ ಸದ್ದಿಲ್ಲದೆ ಬೆಳೆದು ನಿಂತಿರುವ ಈತ, ಇಂದು ನೆಟ್ಟಿಗರು ಗುರುತೇ ಹಿಡಿಯದಷ್ಟು ಸಂಪೂರ್ಣವಾಗಿ ಬದಲಾಗಿದ್ದು, ಆತನ ಇತ್ತೀಚಿನ ಲುಕ್ ಕಂಡು ಇಂಟರ್ನೆಟ್ ದುನಿಯಾ ಹುಬ್ಬೇರಿಸಿದೆ.!
ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪ್ಲ್ಯಾನ್‌ ಇಲ್ಲದೆಯೇ, ಆಕಸ್ಮಿಕವಾಗಿ ವೈರಲ್ ಆಗಿ ರಾತ್ರೋರಾತ್ರಿ ಜಾಗತಿಕ ಸೆಲೆಬ್ರಿಟಿಯಾದವರ ಸಾಲಿಗೆ ನಬಿಲ್ ಸೆಬ್ತಿ ( Nabil Sebti ) ಕೂಡ ಸೇರುತ್ತಾರೆ. ಇನ್‌ಸ್ಟಾಗ್ರಾಮ್ ರೀಲ್ಸ್ ಹಾಗೂ ಮೀಮ್ಸ್ ವಿಡಿಯೋಗಳಲ್ಲಿ ತನ್ನ ವಿಭಿನ್ನ ಹಾಗೂ ಮಜಾವಾದ ನಗುವಿನ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ನೆಟ್ಟಿಗರಿಗೆ ಪರಿಚಿತನಾಗಿರುವ ಈ ವೈರಲ್ ಹುಡುಗನ ಆ ಒಂದು ಸಣ್ಣ ವಿಡಿಯೋ ತುಣುಕು ಇಂದಿಗೂ ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.
ಈತನ ಬೇರೆ ಯಾವುದೇ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿಲ್ಲದಿದ್ದರೂ, ಹಳೆಯದ್ದೇ ಆದ ಆ ಒಂದು ವಿಶಿಷ್ಟ ಆಡಿಷನ್ ಕ್ಲಿಪ್ ಸದ್ಯ ಫಿಫಾ ವಿಶ್ವಕಪ್ 2026ರ (FIFA World Cup 2026) ಸಂದರ್ಭದಲ್ಲಿ ಮತ್ತೊಮ್ಮೆ ಟ್ರೆಂಡಿಂಗ್‌ಗೆ ಬಂದಿದ್ದು, ನೆಟ್ಟಿಗರ ಮುಖದಲ್ಲಿ ಎಂದಿನಂತೆ ಹಾಸ್ಯದ ನಗು ಮೂಡಿಸುತ್ತಿದೆ.
ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿರುವ ಹೊಸ ವಿಡಿಯೋದಲ್ಲಿ, ನಬಿಲ್ ಸೆಬ್ತಿ ತಾನು ಫಿಫಾ ವಿಶ್ವಕಪ್ ಪಂದ್ಯವನ್ನು ವೀಕ್ಷಿಸಲು ಹೋಗುವಾಗ ತನ್ನದೇ ಹಳೆಯ ವೈರಲ್ ಫೋಟೋ ಇರುವ ಪೋಸ್ಟರ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುವುದನ್ನು ಕಾಣಬಹುದು. ಕ್ರೀಡಾಂಗಣದ ಮುಂಭಾಗದಲ್ಲಿ ನೆರೆದಿರುವ ಜನಸಮೂಹದ ಮಧ್ಯೆ ಕೂತು ತನ್ನದೇ ಚಿತ್ರವಿರುವ ಆ ಪೋಸ್ಟರ್ ಅನ್ನು ತೋರಿಸುತ್ತಾ, ಆತ ಕ್ಯಾಮೆರಾದತ್ತ ನೋಡಿ ಅದೇ ವಿಶಿಷ್ಟ ಶೈಲಿಯಲ್ಲಿ ನಗುತ್ತಾ ಪೋಸ್ ನೀಡಿದ್ದಾನೆ. ಈ ವಿಡಿಯೋ ಪ್ರಸ್ತುತ ಜಾಲತಾಣದಲ್ಲಿ ಭಾರಿ ಸೌಂಡ್ ಮಾಡುತ್ತಿದ್ದು, ನೆಟ್ಟಿಗರ ಮನ ಗೆಲ್ಲುತ್ತಿದೆ.

ಯಾರು ಈ ನಬಿಲ್ ಸೆಬ್ತಿ?

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸೌಂಡ್ ಮಾಡುತ್ತಿರುವ ಆ ವಿಡಿಯೋದಲ್ಲಿರುವ ಯುವಕನೇ ನಬಿಲ್ ಸೆಬ್ತಿ. ಈತ ಪ್ರಸಿದ್ಧ ರಿಯಾಲಿಟಿ ಶೋ 'ಅರಬ್ ಐಡಲ್' ಕಾರ್ಯಕ್ರಮದ ಗಾಯನ ವಿಭಾಗದ ಆಡಿಷನ್‌ನಲ್ಲಿ ಭಾಗವಹಿಸಿದಾಗ ಮೊದಲ ಬಾರಿಗೆ ಜಗತ್ತಿಗೆ ಪರಿಚಿತನಾಗಿದ್ದನು. ಆದರೆ, ಆತನ ಹಾಡಿಗಿಂತಲೂ ಆತ ಆಡಿಷನ್ ವೇಳೆ ನಕ್ಕ ವಿಶಿಷ್ಟ ಶೈಲಿಯೇ ಇಂಟರ್ನೆಟ್‌ನಲ್ಲಿ ಹೆಚ್ಚು ಜನಪ್ರಿಯವಾಯಿತು.
ಹಾಡುವ ಸಂದರ್ಭದಲ್ಲಿ ನಬಿಲ್ ಒಂದಕ್ಕಿಂತ ಹೆಚ್ಚು ಬಾರಿ ನಿಯಂತ್ರಿಸಲಾಗದೆ ಜೋರಾಗಿ ನಕ್ಕಿದ್ದು, ಅದು ಅಲ್ಲಿದ್ದ ತೀರ್ಪುಗಾರರು ಹಾಗೂ ಪ್ರೇಕ್ಷಕರನ್ನು ಅತೀವವಾಗಿ ರಂಜಿಸಿತ್ತು. ಈ ಮಜಾವಾದ ಕ್ಷಣವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಮೀಮ್ಸ್ ಹಾಗೂ ಟ್ರೋಲ್‌ಗಳ ಮೂಲಕ ಜಾಗತಿಕ ಮಟ್ಟದಲ್ಲಿ ವೈರಲ್ ಮಾಡಿದ್ದರಿಂದ, ನಬಿಲ್ ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದ ದೊಡ್ಡ ಸೆಲೆಬ್ರಿಟಿಯಾಗಿ ಹೊರಹೊಮ್ಮಿದನು.
ನಬಿಲ್ ಸೆಬ್ತಿ ನಗುತ್ತಿರುವ ವಿಡಿಯೋಗಳು, ಜಿಫ್‌ಗಳು ಮತ್ತು ರಿಯಾಕ್ಷನ್ ವಿಡಿಯೋಗಳು ಕ್ರಮೇಣ ಇಂಟರ್ನೆಟ್ ಲೋಕವನ್ನು ಆವರಿಸಿಕೊಂಡವು. ಪ್ರಸ್ತುತ ದಿನಗಳಲ್ಲೂ ನಬಿಲ್ ಸೋಶಿಯಲ್ ಮೀಡಿಯಾದ ನೆಚ್ಚಿನ ಮೀಮ್ ಫೇಸ್ ಆಗಿ ಮುಂದುವರಿದಿದ್ದು, ಇದೀಗ ಅವರು ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಈ ಬಾರಿ ಅವರು ಫಿಫಾ ವಿಶ್ವಕಪ್ 2026ರ ಪಂದ್ಯವೊಂದರಲ್ಲಿ ಮಾಡಿದ ಮೋಜಿನ ಕೆಲಸವೇ ಜನರು ಮತ್ತೊಮ್ಮೆ ನಗುವಂತೆ ಮಾಡಿದೆ ಮತ್ತು ಅವರತ್ತ ಎಲ್ಲರೂ ತಿರುಗಿ ನೋಡುವಂತೆ ಮಾಡಿದೆ. ನಬಿಲ್ ತಮ್ಮದೇ ಮುಖದ ಕ್ಲೋಸ್-ಅಪ್ ಇರುವ ಅತಿ ದೊಡ್ಡ ಪೋಸ್ಟರ್ ಒಂದನ್ನು ಹಿಡಿದುಕೊಂಡು ಕ್ರೀಡಾಂಗಣದೊಳಗೆ ಪ್ರವೇಶಿಸಿದ್ದರು. ಕ್ರೀಡಾಂಗಣದ ಕ್ಯಾಮರಾ ಕಣ್ಣುಗಳು ಈ ತಮಾಷೆಯ ದೃಶ್ಯವನ್ನು ಸೆರೆಹಿಡಿಯುತ್ತಿದ್ದಂತೆ, ಈ ದೃಶ್ಯಾವಳಿಗಳು ಇಂಟರ್ನೆಟ್‌ನಲ್ಲಿ ಅತ್ಯಂತ ವೇಗವಾಗಿ ಹರಿದಾಡಿದವು. ಕ್ರೀಡಾಂಗಣದಲ್ಲಿದ್ದ ಸಾವಿರಾರು ಪ್ರೇಕ್ಷಕರು ನಬಿಲ್ ತಮ್ಮದೇ ಫೋಟೋವನ್ನು ಹಿಡಿದು ಓಡಾಡುತ್ತಿರುವುದನ್ನು ನೇರವಾಗಿ ಕಣ್ಣಾರೆ ಕಂಡು ಆನಂದಿಸಿದ್ದು, ನೆಟ್ಟಿಗರು ಕೂಡ ಈ ವಿಡಿಯೋವನ್ನು ಅಷ್ಟೇ ಇಷ್ಟಪಟ್ಟಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net