ತಗ್ಗು-ದಿನ್ನೆಗಳಿಂದ ಕೂಡಿದ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟಕರ. ಹಗಲಿನಲ್ಲಿ ಹೇಗಾದರೂ ಬಿದ್ದು, ಎದ್ದು ಸಂಚಾರ ಮಾಡಬಹುದು, ಆದರೆ ರಾತ್ರಿ ಹೊತ್ತಲ್ಲಿ ಸಂಚಾರ ದುಸ್ತರವಾಗಿದೆ. ಮಳೆಗಾಲದಲ್ಲಂತೂ ವಾಹನಗಳು ಹೋಗುವಂತಿಲ್ಲ. ಈ ರಸ್ತೆಯಿಂದ ರಾಜಶ್ರೀ ಸಿಮೆಂಟ್ ಕಂಪನಿಗೆ ಹೋಗಲು ನೌಕರರಿಗೆ ಅನುಕೂಲವಾಗುತ್ತದೆ. ಅಲ್ಲದೆ ಜಮೀನುಗಳಿಗೆ ಹೋಗಲು ರೈತರಿಗೆ ನೆರವಾಗುತ್ತದೆ. ಇದೆಲ್ಲದ್ದಕ್ಕಿಂತಲೂ ಚಿತ್ತಾಪುರದಿಂದ ಮಳಖೇಡ ಹಾಗೂ ಸೇಡಂಗೆ ಸಂಚರಿಸಲು ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ.