ಇದೀಗ ಮಳೆಗಾಲ ಆರಂಭವಾಗುತ್ತಿದ್ದು, ನೀರು ಸಂಗ್ರಹವಾಗಿ ತಗ್ಗು ಯಾವುದು ? ರಸ್ತೆ ಯಾವುದು ಎಂಬುದು ತಿಳಿಯದಂತಾಗಿದೆ. ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು ತಗ್ಗಿನಲ್ಲಿ ಬೈಕ್ ಸಾಗಿಸಿ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ರಸ್ತೆ ಸರಿಪಡಿಸುವಂತೆ ನಗರಸಭೆಗೆ ಸ್ಥಳಿಯರು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಕನಿಷ್ಟ ತಗ್ಗುಗಳನ್ನು ಮುಚ್ಚುವ ಗೋಜಿಗೂ ಹೋಗಿಲ್ಲ.