ಕರ್ನಾಟಕ: ಕಾಡಿನ ಮಧ್ಯೆ ಹಸಿರ ಸೌಂದರ್ಯ ಸವಿಯುತ್ತಾ, ಪ್ರಾಣಿ-ಪಕ್ಷಿಗಳನ್ನು ನೋಡಿ ಆನಂದಿಸಬೇಕಾದ ಪ್ರವಾಸಿಗರು ಬಂಡೀಪುರ ಅಭಯಾರಣ್ಯದಲ್ಲಿ (Tourists in BandipurTigerReserve) ಮಾಡಬಾರದ ಕೆಲಸ ಮಾಡಿದ್ದಾರೆ. ಚಲಿಸುವ ಕಾರಿನಿಂದ ಬಿಯರ್ ಕ್ಯಾನ್‌ಗಳು ಹಾಗೂ ಬಳಸಿದ ಟಿಶ್ಯೂ ಪೇಪರ್‌ಗಳನ್ನು ರಸ್ತೆಗೆ ಎಸೆದು ತಮ್ಮ ವಿಕೃತ ಬುದ್ಧಿ ಪ್ರದರ್ಶಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.