ಬಾಲಿವುಡ್​ನಿಂದ ರಣವೀರ್​ ಬ್ಯಾನ್?​ ಧುರಂಧರ್​ ಸಕ್ಸಸ್​ ನೋಡಿ ಇವರಿಗೆಲ್ಲಾ ಹೊಟ್ಟೆಯುರಿ; ಶೋಭಾ ಡೆ ಆಕ್ರೋಶ! Shobhaa De on Ranveer Singh Ban

ರಣವೀರ್​ ಪರ ನಿಂತ ಖ್ಯಾತ ಕಾದಂರಿಗಾರ್ತಿ ಶೋಭಾ ಡೆ
ರಣವೀರ್​ ಪರ ನಿಂತ ಖ್ಯಾತ ಕಾದಂರಿಗಾರ್ತಿ ಶೋಭಾ ಡೆ
Published on
ಮುಂಬೈ: ಡಾನ್​ 3 ಸಿನಿಮಾದಿಂದ ನಟ ರಣವೀರ್​ ಸಿಂಗ್​ ಹೊರನಡೆದ ಕಾರಣ ಬಾಲಿವುಡ್‌ನ ಚಲನಚಿತ್ರ ಕಾರ್ಮಿಕರ ಒಕ್ಕೂಟ ರಣವೀರ್​ ಸಿಂಗ್​ ನಟಿಸುವ ಸಿನಿಮಾಗಳಲ್ಲಿ ತಾವು ನಟಿಸುವುದಿಲ್ಲ ಎಂದು ಹೇಳುವ ಮೂಲಕ ನಟನನ್ನು ಚಿತ್ರರಂಗದಿಂದ ಬ್ಯಾನ್​ ಮಾಡುವ ವಾತಾರಣವನ್ನು ನಿರ್ಮಿಸಿದೆ.
ಈಗ ಈ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಕಾದಂಬರಿಗಾರ್ತಿ ಹಾಗೂ ಅಂಕಣಗಾರ್ತಿ ಶೋಭಾ ಡೆ (Shobhaa De on Ranveer Singh Ban), ಧುರಂಧರ್​ ಸಿನಿಮಾದ ಯಶಸ್ಸನ್ನು ಸಹಿಸದ ಮನಸ್ಥಿತಿಗಳು ನಟ ರಣವೀರ್​ ಹಾಗೂ ನಿರ್ದೇಶಕ ಆದಿತ್ಯ ಧರ್​ ಮೇಲೆ ರೂಪಿಸಿರುವ ಷಡ್ಯಂತ್ರವಾಗಿದೆ ಎಂದು ಹೇಳಿದ್ದಾರೆ.

ರಣವೀರ್​ ಮೌನವಹಿಸಿರುವುದು ಸರಿಯಿದೆ!

ಈ ನಿಷೇಧದ ಕುರಿತು ಕೇವಲ ಸಿನಿಮಾರಂಗ ಮಾತ್ರವಲ್ಲ ರಾಜಕೀಯದಲ್ಲಿ ಸಹ ಸದ್ದು ಮಾಡುತ್ತಿದ್ದರೂ ನಟ ರಣವೀರ್​ ಇದು ಯಾವುದಕ್ಕೂ ರಿಯಾಕ್ಷನ್​ ಕೊಟ್ಟಿಲ್ಲ.
ಇದನ್ನು ಮೆಚ್ಚಿಕೊಂಡಿರುವ ಶೋಭಾ ಡೆ, ರಣವೀರ್​ ಒಬ್ಬ ಪ್ರಬುದ್ಧ, ಚಾಣಾಕ್ಷ ಹಾಗೂ ತೀಕ್ಷಮತಿಯುಳ್ಳ ವ್ಯಕ್ತಿಯಾಗಿರುವ ಕಾರಣ ಈ ವಿಷಯದ ಬಗ್ಗೆ ಆತ ಮೌನವಾಗಿದ್ದಾನೆ. ಅವನು ಮೌನವಾಗಿದಷ್ಟು ಜನರ ಮನಸ್ಸಿಗೆ ಆತ ಹತ್ತಿರವಾಗುತ್ತಾ ಹೋಗುತ್ತಾನೆ. ಬೊಬ್ಬೆ ಹಾಕುತ್ತಿರುವವರು ಮೂರು ದಿನ ಕಳೆದ ಮೇಲೆ ಸುಮ್ಮನಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ನೋಟಿಸ್​ ಕೊಟ್ಟರು ಕ್ಯಾರೆ ಎನ್ನದ ರಣವೀರ್!

ರಣವೀರ್​ ಜೊತೆ ಸಿನಿಮಾ ಮಾಡಲು ಒಪ್ಪದ ಒಕ್ಕೂಟದ ನಿರ್ಧಾರದ ಹಿಂದಿನ ಸತ್ಯಾಂಶವನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದ ಅಧ್ಯಕ್ಷ ಅಶೋಕ್ ಪಂಡಿತ್ ಬಿಚ್ಚಿಟ್ಟಿದ್ದಾರೆ.
ಫರ್ಹಾನ್ ಅಖ್ತರ್ ದೂರು ಕೊಟ್ಟ ನಂತರ ನಾವು ರಣವೀರ್ ಸಿಂಗ್‌ ಅವರಿಗೆ ತಮ್ಮ ವಾದ ಮಂಡಿಸಲು ಪ್ರತಿ 10-15 ದಿನಗಳಿಗೊಮ್ಮೆ ರಿಮೈಂಡರ್ ಕಳುಹಿಸಿದೆವು. ಒಟ್ಟು 3 ಅಧಿಕೃತ ನೋಟಿಸ್‌ ನೀಡಿದರೂ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದರೆ, ನಾವು ಪತ್ರಿಕಾಗೋಷ್ಠಿ ಮಾಡುವುದಾಗಿ ಅನೌನ್ಸ್ ಮಾಡಿದ ತಕ್ಷಣ ರಣವೀರ್ ಟೀಮ್‌ನಿಂದ ಒಂದು ಇಮೇಲ್ ಬಂತು. ಅದರಲ್ಲಿ ಅವರು, ಈ ವಿಷಯದಲ್ಲಿ ತಲೆಹಾಕಲು ಫೆಡರೇಶನ್‌ಗೆ ಯಾವುದೇ ಹಕ್ಕಿಲ್ಲ ಎಂದು ಉದ್ಧಟತನದ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net