ಪ್ಲೇಆಫ್ಸ್ ಮಿಸ್ ಆದ್ರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪಂಜಾಬ್​ ಕಿಂಗ್ಸ್​ ಪ್ರದರ್ಶನದ ಬಗ್ಗೆ ಪ್ರೀತಿ ಜಿಂಟಾ ಭಾವುಕ ಪೋಸ್ಟ್! Preity Zinta on Punjab Kings

ನಾವು ಪ್ಲೇಆಫ್ಸ್ ಪ್ರವೇಶ ಮಾಡದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪ್ರೀತಿ ಜಿಂಟಾ
ನಾವು ಪ್ಲೇಆಫ್ಸ್ ಪ್ರವೇಶ ಮಾಡದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪ್ರೀತಿ ಜಿಂಟಾ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ 2026 ರಿಂದ ಹೊರಬಿದ್ದ ಪಂಜಾಬ್​ ಕಿಂಗ್ಸ್​
  • ಟೂರ್ನಿ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಂಡ
  • ನಾವು ಪ್ಲೇಆಫ್ಸ್ ಪ್ರವೇಶ ಮಾಡದಿದ್ದರೂ ಅಭಿಮಾನಿಗಳ ಮನ ಗೆದ್ದಿದ್ದೆವೆ: ಪ್ರೀತಿ ಜಿಂಟಾ
  • ತಂಡದ ಕುರಿತು ಮಾಲಕಿ ನಟಿ ಪ್ರೀತಿ ಜಿಂಟಾ ಭಾವನಾತ್ಮಕ ಪೋಸ್ಟ್​​
ಐಪಿಎಲ್​: ಇನ್ನೇನು ಕೆಲವೇ ದಿನಗಳಲ್ಲಿ ಭಾರತದ ಕ್ರಿಕೆಟ್​ ಹಬ್ಬವಾದ ಐಪಿಎಲ್​ 2026 ಮುಕ್ತಾಯವಾಗಲಿದೆ. ಕ್ವಾಲಿಫೈಯರ್​ ಸುತ್ತಿನಲ್ಲಿ ಜಯಗಳಿಸುವ ಮೂಲಕ ಆರ್​ಸಿಬಿ ತಂಡ ಫೈನಲ್​ ಪ್ರವೇಶಿದ್ದು, ಶುಕ್ರವಾರ (ಮೇ.29) ನಡೆಯಲಿರುವ ಕ್ವಾಲಿಫೈಯರ್​ 2 ನಲ್ಲಿ ಯಾವ ತಂಡ ಗೆಲ್ಲುತ್ತದೋ ಅದು ಭಾನುವಾರ (ಮೇ.31) ರಂದು ನಡೆಯಲಿರುವ ಫೈನಲ್​ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ.
ಅದರೆ, ಈ ಭಾರಿಯ ಐಪಿಎಲ್​​ನಲ್ಲಿ ಪ್ರಾರಂಭದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ನಂತರ ಹಳಿತಪ್ಪಿದ ಪಂಜಾಬ್​ ಕಿಂಗ್ಸ್​ ತಂಡ ಪ್ಲೇಆಫ್ಸ್​ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಯಿತು. ಈಗ, ತಮ್ಮ ತಂಡದ ಪ್ರದರ್ಶನ ಹಾಗೂ ಆಟಗಾರರ ಕುರಿತಾಗಿ ತಂಡದ ಮಾಲಕಿಯಾದ ಬಾಲಿವುಡ್​ ನಟಿ ಪ್ರೀತಿ ಜಿಂಟಾ (Preity Zinta on Punjab Kings) ತಮ್ಮ ಎಕ್ಸ್​ ಖಾತೆಯಲ್ಲಿ ಟ್ವಿಟ್​ ಮಾಡಿದ್ದಾರೆ.

ಅಭಿಮಾನಿಗಳಿಗೆ ಆಭಾರಿ

ಈ ಭಾರಿಯ ಐಪಿಎಲ್​ 2026 ನಮ್ಮ ಪಾಲಿಗೆ ರೋಲರ್​-ಕೋಸ್ಟರ್ ರೈಡ್ ಆಗಿತ್ತು. ನಮ್ಮ ಈ ಒಳ್ಳೆಯ ಹಾಗೂ ಕೆಟ್ಟ ಎರಡು ಸಮಯದಲ್ಲಿ ನಮ್ಮ ತಂಡದೊಟ್ಟಿಗಿದ್ದ ಅಭಿಮಾನಿಗಳಿಗೆ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿ ನಮ್ಮ ಪ್ರಯಾಣವನ್ನು ಸಂಪೂರ್ಣಗೊಳಸಿದೆ. ಎಂದು ಅವರು ಬರೆದುಕೊಂಡಿದ್ದಾರೆ. 
ಈ ಸೀಸನ್​ನಲ್ಲಿ 15 ಅಂಕಗಳನ್ನು ಪಡೆಯುವ ಮೂಲಕ ಪಂಜಾಬ್​ ಕಿಂಗ್ಸ್​ ತಂಡ 5 ನೇ ಸ್ಥಾನವನ್ನು ಪಡೆದುಕೊಂಡಿತು. ರಾಜಸ್ಥಾನ್​ ರಾಯಲ್ಸ್​ ತಂಡ ತನ್ನ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಸೋಲಿಸುವ ಮೂಲಕ 4 ನೇ ಸ್ಥಾನವನ್ನು ಗಿಟ್ಟಿಸಿಕೊಂಡಿತು. 

ಶುಭಾರಂಭ ಮಾಡಿದ್ದ ಪಂಜಾಬ್​!

2026 ನೇ ಸಾಲಿನ ಐಪಿಎಲ್​ ಪ್ರಾರಂಭಿಕ ಪಂದ್ಯಗಳಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಉತ್ತಮ ಆರಂಭವನ್ನು ಮಾಡಿತ್ತು. ಮೊದಲ ಏಳು ಪಂದ್ಯಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋಲದೇ (ಆರು ಜಯ, ಒಂದು ಮಳೆಯಿಂದ ರದ್ದು) 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು.
ಆದರೆ ನಂತರದ ಪಂದ್ಯಗಳಲ್ಲಿ ನಿರಂತರವಾಗಿ 6 ಪಂದ್ಯಗಳನ್ನು ಸೋಲುವ ಮೂಲಕ ಪ್ಲೇಆಫ್​ ಕನಸಿಗೆ ತಣ್ಣೀರನ್ನು ಎರಚಿಕೊಂಡಿತ್ತು. ಕೊನೆಯ ಪಂದ್ಯದಲ್ಲಿ ಲಖನೌ ವಿರುದ್ಧ ಜಯಗಳಿಸಿ 15 ಅಂಕದೊಂದಿದೆ 5 ನೇ ಸ್ಥಾನ ಪಡೆದುಕೊಂಡಿತು, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net