ಸುಮ್ಮನಿರಿ, ಇಲ್ಲಾಂದ್ರೆ ಉಡಾಯಿಸಿ ಬಿಡ್ತೀವಿ! ಇರಾನ್ ಪರ ವಾಲಿದ ಓಮನ್; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ! Donald Trump threatens Oman
ಓಮನ್ ದೇಶಕ್ಕೆ ಡೊನಾಲ್ಡ್ ಟ್ರಂಪ್ ಬೆದರಿಕೆ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ಮುಗಿಯದ ಯುದ್ಧ
ಓಮನ್ ದೇಶಕ್ಕೆ ಡೊನಾಲ್ಡ್ ಟ್ರಂಪ್ ಬೆದರಿಕೆ
ಇರಾನ್ ಪರ ವಾಲುತ್ತಿದ್ದ ಓಮನ್
ಸುಮ್ಮನಿರಿ, ಇಲ್ಲಾಂದ್ರೆ ಉಡಾಯಿಸಿ ಬಿಡ್ತೀವಿ: ಎಂದ ಅಮೆರಿಕ ಅಧ್ಯಕ್ಷ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಾರ್ಮೋಡ ಕವಿಯುತ್ತಿದ್ದು, ಹೊರ್ಮುಜ್ ಜಲಸಂಧಿಗೆ ಸಂಬಂಧಿಸಿದಂತೆ ಇರಾನ್ ಜೊತೆ ಕೇವಲ ಅಮೆರಿಕ ಮಾತ್ರ ಮಾತನಾಡಲಿದೆ. ಈ ವಿಷಯದ ಬಗ್ಗೆ ಇರಾನ್ಗೆ ಬೆಂಬಲ ಸೂಚಿಸಲು ಬಂದ ದೇಶಕ್ಕೆ ತಕ್ಕ ಪಾಠವನ್ನು ಕಲಿಸ ಬೇಕಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಓಮನ್ ದೇಶಕ್ಕೆ ಬೆದರಿಕೆ (Donald Trump threatens Oman) ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಓಮನ್ ಈ ವಿಚಾರದಲ್ಲಿ ಸರಿಯಾಗಿ ವರ್ತಿಸಬೇಕು, ಇಲ್ಲದಿದ್ದರೆ ಅವರನ್ನು ಉಡಾಯಿಸಿ ಬಿಡ್ತಿವಿ ಎಂದು ಬೆದರಿಕೆ ಹಾಕಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ಇರಾನ್ ಹಾಗೂ ಅದರ ಮಿತ್ರ ದೇಶ ಓಮನ್ ಜಂಟಿಯಾಗಿ ನಿರ್ವಹಿಸುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಟ್ರಂಪ್, ಅಂತಾರಾಷ್ಟ್ರೀಯ ಜಲಸಂಧಿ ಎಲ್ಲರಿಗೂ ಸಂಬಂಧ ಪಟ್ಟಿದೆ, ಓಮನ್ ಕೂಡ ಇತರೆ ದೇಶಗಳೆಂತೆ ವರ್ತಿಸಬೇಕೆಂದು ಹೇಳಿದ್ದಾರೆ.
ಓಮನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರವಾಗಿದ್ದು, ಇರಾನ್ ನಡುವಿನ ಸಂಘರ್ಷದಲ್ಲಿ ಮಿಸೈಲ್ ದಾಳಿಯನ್ನು ಸಹ ಎದುರಿಸಿದೆ. ಆದರೆ ಇತ್ತೀಚೆಗೆ ಇರಾನ್ ಕಡೆ ಓಮನ್ ವಾಲುತ್ತಿರುವ ಹಿನ್ನಲೆ ಈ ಬೆದರಿಕೆ ಅಮೆರಿಕ ಅಧ್ಯಕ್ಷರಿಂದ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳ ಹಿಂದೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಲಹೆಗಾರ ಮತ್ತು ಅದರ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಓಮನ್ ದೇಶಕ್ಕೆ ತೆರಳಿದ ನಂತರ ಓಮನ್ ಇರಾನ್ ಪರ ಮಾತನಾಡಲು ಪ್ರಾರಂಭಿಸಿತ್ತು ಎಂಬ ವದಂತಿಯಿದೆ.
ಇರಾನ್ ಮೇಲೆ ಅಮೆರಿಕ ದಾಳಿ!
ಗುರುವಾರ (ಮೇ.28) ಬೆಳಗಿನ ಜಾವ ಒಂದು ಗಂಟೆ ಸುಮಾರಿಗೆ ಅಮೆರಿಕ ಹೊರ್ಮುಜ್ ಜಲಸಂಧಿ ಸಮೀಪದಲ್ಲಿರುವ ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಮೇಲೆ ಅಮರಿಕ ಡ್ರೋನ್ ದಾಳಿ ನಡೆಸಿದೆ. ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡುಗಗಳ ಮೇಲೆ ಇರಾನ್ ದಾಳಿ ಮಾಡಿದ ಹಿನ್ನಲೆ ನಾವು ಪ್ರತೀದಾಳಿ ನಡೆಸಿದ್ದೆವೆ ಎನ್ನುವುದು ಅಮೆರಿಕದ ವಾದವಾಗಿದೆ.
ಇರಾನಿನ ಬಂದರ್ ಅಬ್ಬಾಸ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ ನಡೆಸಿದ ಹಿನ್ನಲೆ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕದ ವಾಯುನೆಲೆಗಳ ಮೇಲೆ ಪ್ರತಿದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಆದರೆ ಇರಾನ್ ಅಮೆರಿಕದ ಯಾವ ವಾಯುನೆಲೆ ಮೇಲೆ ದಾಳಿ ನಡೆಸಿದೆ ಎಂದು ಸ್ಪಷ್ಟವಾಗಿಲ್ಲ, ಆದರೆ ವದಂತಿಗಳ ಪ್ರಕಾರ ಯುಎಸ್ನ ಮಿತ್ರ ದೇಶವಾಗಿರುವ ಕುವೈತ್ ಮೇಲೆ ದಾಳಿ ನಡೆದಿರಬಹುದು ಎಂದು ಹೇಳಲಾಗುತ್ತಿದೆ, (ಏಜನ್ಸೀಸ್).