ಬೆಂಬಲ ಬೆಲೆಯಡಿ ತೊಗರಿ ಮಾರಿ

ಕಮಲಾಪುರ ತಾಲೂಕಿನ ಕುರಿಕೋಟಾ ಪಿಕೆಪಿಎಸ್​ನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿಗೆ ಮಂಗಳವಾರ ಚಾಲನೆ ನೀಡಲಾಯಿತು. ಸರಡಗಿ ಶ್ರೀ ರೇವಣಸಿದ್ದ ಶಿವಾಚಾರ್ಯ, ಬ್ಲಾಕ್​ ಕಾಂಗ್ರೆಸ್​ ಅಧ್ಯ ವೈಜಿನಾಥ ತಡಕಲ್​, ಪಿಕೆಪಿಎಸ್​ ಅಧ್ಯ ಗಣೇಶ ಚಿಕನಾಗಾಂವ, ರಮೇಶ ಸಾಹು ಇತರರಿದ್ದರು
ಕಮಲಾಪುರ ತಾಲೂಕಿನ ಕುರಿಕೋಟಾ ಪಿಕೆಪಿಎಸ್​ನಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿಗೆ ಮಂಗಳವಾರ ಚಾಲನೆ ನೀಡಲಾಯಿತು. ಸರಡಗಿ ಶ್ರೀ ರೇವಣಸಿದ್ದ ಶಿವಾಚಾರ್ಯ, ಬ್ಲಾಕ್​ ಕಾಂಗ್ರೆಸ್​ ಅಧ್ಯ ವೈಜಿನಾಥ ತಡಕಲ್​, ಪಿಕೆಪಿಎಸ್​ ಅಧ್ಯ ಗಣೇಶ ಚಿಕನಾಗಾಂವ, ರಮೇಶ ಸಾಹು ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೈಜಿನಾಥ ತಡಕಲ್​ ಮನವಿ
  • ಕುರಿಕೋಟದಲ್ಲಿ ಖರೀದಿ ಕೇಂದ್ರಕ್ಕೆ ಚಾಲನೆ
ಕಮಲಾಪುರ: ನೋಂದಣಿ ಮಾಡಿಸಿರುವ ರೈತರು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ಪಿಕೆಪಿಎಸ್​)ದಲ್ಲಿ ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಮಾರಾಟ ಮಾಡಿ ಮೂಲಕ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಮಲಾಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೈಜಿನಾಥ ತಡಕಲ್​ ಹೇಳಿದರು.
ಕುರಿಕೋಟಾ ಪಿಕೆಪಿಎಸ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ವಿಂಟಾಲ್​ಗೆ 8000 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲಾಗುತ್ತಿದೆ. ಎಕರೆಗೆ ನಾಲ್ಕು ಕ್ವಿಂಟಾಲ್​ ಅಥವಾ ಒಬ್ಬ ರೈತ 25 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಮಾರಾಟ ಮಾಡಬಹುದು ಎಂದರು.
ಸರಡಗಿ-ಕುರಿಕೋಟಾ ಶ್ರೀ ರೇವಣಸಿದ್ದ ಶಿವಾಚಾರ್ಯ, ಪಿಕೆಪಿಎಸ್​ ಅಧ್ಯಕ್ಷ ಗಣೇಶ ಚಿಕನಾಗಾಂವ, ರಮೇಶ ಸಾಹು, ಅಜರ್​ ಪಟೇಲ್​, ಶರಣಬಸಪ್ಪ ಡೋಣಿ, ಹೀರಾಬಾಯಿ ಸುಗೂರ, ಸುಭಾಷ ಕಲ್ಲೂರ, ಮಲ್ಲೆಶಿ ಪೂಜಾರಿ, ಅಭಿಲಾಶ ಮದಿನಕರ್​, ಮಲ್ಲೆಶಿ ಪೂಜಾರಿ, ಶರಣಬಸಪ್ಪ ಚಿಕಗಾಗಾಂವ, ಲೋಹಿತ ಹುಡಗಿ, ಸಂಘದ ಕಾರ್ಯದರ್ಶಿ ಮಡಿವಾಳಪ್ಪ ಗೌಡಪಗೋಳ ಇತರರಿದ್ದರು.
"

ಅಗತ್ಯ ಪ್ರಚಾರ ಮತ್ತು ಜಾಗೃತಿ ಕೊರತೆಯಿಂದ ಸಾಕಷ್ಟು ರೈತರು ನೋಂದಣಿ ಮಾಡಿಸಿಲ್ಲ. ಸರ್ಕಾರ ನೋಂದಣಿಗೆ ಇನ್ನಷ್ಟು ಕಾಲಾವಕಾಶ ನೀಡಿದರೆ ರೈತಾಪಿ ವರ್ಗಕ್ಕೆ ಅನಕೂಲವಾಗಲಿದೆ.

— > ಶ್ರೀ ರೇವಣಸಿದ್ದ ಶಿವಾಚಾರ್ಯ ಸರಡಗಿ&ಕುರಿಕೋಟಾ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net