ನಿಜಶರಣ ಅಂಬಿಗರ ಚೌಡಯ್ಯ ಸೊಸೈಟಿ ಅಧ್ಯ ಶಿವಾನಂದ ಕೋಲಕಾರ ಮಾತನಾಡಿ, ಅಂಬಿಗರ ಚೌಡಯ್ಯನವರು ಆಗಿನ ಕಾಲದಲ್ಲಿಯೇ ಮೂಢನಂಬಿಕೆ ವಿರೋಧಿಸಿ ತರ್ಕಬದ್ಧವಾದ ವಚನ ರಚಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಾಜದಲ್ಲಿನ ಕಂದಾಚಾರ ನಿವಾರಿಸಿ ವೈಚಾರಿಕತೆಯ ದೀಪ ಹಚ್ಚಲು ಹಾಗೂ ನವ ಸಮಾಜ ನಿರ್ಮಾಣಕ್ಕೆ ತಮ್ಮ ಜೀವನವನ್ನೇ ಮೂಡಿಪಾಗಿಟ್ಟ ಮಹನೀಯರು ಎಂದರು. ಉಪ ತಹಸೀಲ್ದಾರ್ ಬಾಹುರಾವ್ ಕುಲಕರ್ಣಿ, ಶಿರಸ್ತೇದಾರ ರಾವೇಂದ್ರ ಪೂಜೇರಿ, ಜಿತೇಂದ್ರ ನಿಡೋಣಿ, ಸಿಬ್ಬಂದಿಗಳಾದ ಸುರೇಶ ಮಾಗಿ, ರಾಜಶೇಖರ ಪೂಜೇರಿ, ಅಭಿಷೇಕ ಕಾರಜೋಳ, ದೀಪಕ ಇತ್ತಿ, ನೀಲವ್ವ ಮಡಿವಾಳರ, ಸುಮಾ ಹಿರೇಮಠ, ಲಕ್ಷಿ$್ಮ ಕೂಗನವರ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಬಾಜಿ, ಮಲ್ಲಪ್ಪ ಗೋಣಿ, ಬಸವರಾಜ ಜಂಬಗಿ, ಯಲ್ಲಪ್ಪ ತಿಮ್ಮಾಪುರ, ಮಹಾಂತೇಶ ಬಾಜಿ ಇತರರಿದ್ದರು.