ಸವದತ್ತಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳವಾಗಿದ್ದ 52 ಮೊಬೈಲ್ ೋನ್ಗಳನ್ನು ಪೊಲೀಸರು ಪತ್ತೆ ಹಚ್ಚಿ ಸೋಮವಾರ ವಾರಸುದಾರರಿಗೆ ಹಸ್ತಾಂತರಿಸಿದರು. ರಾಮದುರ್ಗ ಡಿವೈಎಸ್ಪಿ ಚಿದಂಬರ ಮಡಿವಾಳರ ಮಾತನಾಡಿ, ಮೊಬೈಲ್ ೋನ್ ಕಳೆದುಕೊಂಡವರು ತಣ ಪೊಲೀಸ್ ಠಾಣೆಗೆ ದೂರು ನೀಡಬೇಕು. ತಂತ್ರಾಂಶದ ನೆರವಿನಿಂದ ಕಳೆದುಹೋದ ಮೊಬೈಲ್ಗಳನ್ನು ಪತ್ತೆ ಹಚ್ಚಲಾಗುತ್ತದೆ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರು ಕೆಎಸ್ಪಿ ಆ್ಯಪ್ ಬಳಸಬೇಕು ಎಂದರು. ಸಿಪಿಐ ಸುರೇಶ ಬೆಂಡೆಗುಂಬಳ, ಪಿಎಸ್ಐ ಲಕ್ಷ$್ಮಣ ಗೌಡಿ, ನಾಗರಾಜ ಹೋಳಿ, ಅಮರ ಸಾರಾಪುರೆ, ಮಹೇಶ ಮಾಳಳ್ಳಿ, ವಿನೋದ ದೇಸಾಯಿಪಟ್ಟಿ, ಉದ್ದಪ್ಪ ಪೂಜೇರ ಇತರರಿದ್ದರು.