ಇರಾನ್ ನಾಯಕ ಖಮೇನಿ‌ ಹತ್ಯೆ, ಅಲೀಪುರದಲ್ಲಿ ಮೂರು ದಿನ ಶೋಕಾಚರಣೆ

ಗೌರಿಬಿದನೂರು ತಾಲೂಕಿನ ಅಲೀಪುರದಲ್ಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಲಾಯಿತು.
ಗೌರಿಬಿದನೂರು ತಾಲೂಕಿನ ಅಲೀಪುರದಲ್ಲಿ ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಲಾಯಿತು.
Published on
ಚಿಕ್ಕಬಳ್ಳಾಪುರ: ಇರಾನಿನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆ ಹಿನ್ನೆಲೆಯಲ್ಲಿ ಗೌರಿಬಿದನೂರು ತಾಲೂಕಿನ ಅಲ್ಲೀಪುರದಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ, ಮೂರು‌ ದಿನ ಶೋಕಾಚರಣೆ ಮಾಡಲಾಗುತ್ತಿದೆ.
ಸುದ್ದಿವಾಹಿನಿಗಳಲ್ಲಿ ಹಾಗೂ ಇರಾನಿನಲ್ಲಿರುವ ಸಂಬಂಧಿಕರಿಂದ ಹತ್ಯೆಯ ಮಾಹಿತಿ ಪಡೆಯುತ್ತಿದ್ದಂತೆ ಗ್ರಾಮದಲ್ಲಿನ ಮುಸ್ಲಿಮರು ಕಪ್ಪು ಬಟ್ಟೆ ಧರಿಸಿ, ರೋಧಿಸಿದರು. ಧರ್ಮಗುರು ಹಾಗೂ ಪರಮೋಚ್ಚ ನಾಯಕನನ್ನು ಕೊಲೆಗೈಯ್ಯಲಾಗಿದೆ ಎಂದು ಕಿಡಿಕಾರಿದರು.
ಖಮೇನಿ ಹತ್ಯೆ ಹಿನ್ನೆಲೆಯಲ್ಲಿ ಪ್ರತಿಭಟನೆ, ಮೂರು ದಿನದ ಶೋಕಾಚರಣೆ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ಅಲ್ಲೀಪುರದಲ್ಲಿನ ಜನರಿಗೂ ಇರಾನಿಗೂ ಅವಿನವಭಾವ ಸಂಬಂಧ ಹೊಂದಿದ್ದು ಇಲ್ಲಿನ ಅನೇಕರು ದುಬೈ, ಇರಾನ್ ರಾಜಧಾನಿ ಟೆಹರಾನ್, ಕುಮ್, ಮಶಾದ್ ಸೇರಿದಂತೆ ಹಲವೆಡೆ ವಿವಿಧ ನಗರಗಳಲ್ಲಿ ನೆಲೆಸಿದ್ದಾರೆ. ಆಗಾಗ ಬಂದು ಹೋಗುತ್ತಾರೆ. ಇಲ್ಲಿನ ಕುಟುಂಬಸ್ಥರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್ನೂ ಹತ್ಯೆಯಾಗಿರುವ ಖಮೇನಿ ಈ ಹಿಂದೆ 1986 ರಲ್ಲಿ ಅಲ್ಲೀಪುರಕ್ಕೆ ಭೇಟಿ ನೀಡಿದ್ದು ಇವರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net