ಅಭಿಮಾನೋತ್ಸವದಲ್ಲಿ ಸಾವಿರ ಜನ ಭಾಗಿ

ಭಾಲ್ಕಿ ಬಿಜೆಪಿ ಕಚೇರಿಯಲ್ಲಿ ಬಿ.ಎಸ್​. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಕರಪತ್ರವನ್ನು ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಿಡುಗಡೆ ಮಾಡಿದರು. ವಿಜಯಕುಮಾರ ಪಾಟೀಲ್​ ಗಾದಗಿ, ವೀರಣ್ಣ ಕಾರಬಾರಿ, ಶಿವರಾಜ ಗಂದಗೆ ಇತರರಿದ್ದರು.
ಭಾಲ್ಕಿ ಬಿಜೆಪಿ ಕಚೇರಿಯಲ್ಲಿ ಬಿ.ಎಸ್​. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಕರಪತ್ರವನ್ನು ಮಾಜಿ ಶಾಸಕ ಪ್ರಕಾಶ ಖಂಡ್ರೆ ಬಿಡುಗಡೆ ಮಾಡಿದರು. ವಿಜಯಕುಮಾರ ಪಾಟೀಲ್​ ಗಾದಗಿ, ವೀರಣ್ಣ ಕಾರಬಾರಿ, ಶಿವರಾಜ ಗಂದಗೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿಕೆ
  • ಭಾಲ್ಕಿಯಲ್ಲಿ ಕರಪತ್ರ ಬಿಡುಗಡೆ
ಭಾಲ್ಕಿ: ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅವರು ಜನ ಸೇವೆಯಲ್ಲಿ ಶತಾಯಿಷಿಗಳಾಗಿ ಬಾಳುವಂತಾಗಲಿ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ ಅಭಿಮಾನೋತ್ಸವದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೆ 9ರಂದು ಚಿತ್ರದುರ್ಗದಲ್ಲಿ ಬಿಎಸ್​ವೆ ಅಭಿಮಾನೋತ್ಸವ ಇದೆ. ಕೇಂದ್ರ ಗಹ ಸಚಿವ ಅಮಿತ್​ ಶಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ ಅಧ್ಯತೆ ವಹಿಸಲಿದ್ದಾರೆ. ಜಾತ್ಯಾತಿತ ಮತ್ತು ಪಾತೀತವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಲ್ಕಿ ತಾಲೂಕು ವತಿಯಿಂದ ಸಾವಿರಾರು ಜನ ಭಾಗವಹಿಸುವ ನಿರೀೆ ಇದೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯ ವೀರಣ್ಣ ಕಾರಬಾರಿ ಮಾತನಾಡಿ, ದಣ ಭಾರತದಲ್ಲಿ ಮೊದಲು ಬಾರಿಗೆ ಬಿಜೆಪಿ ಸರ್ಕಾರ ರಚಿಸಿದ ಶ್ರೇಯಸ್ಸು ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ರೆತರಿಗೆ ಬಡ್ಡಿರಹಿತ ಸಾಲ ನೀಡಿ, ಕಷಿ ಬಜೆಟ್​ ಮಂಡನೆ ಮಾಡಿದ ರಾಜ್ಯದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ಶಿಣದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಉಚಿತ ಬೆಸಿಕಲ್​ ಸೌಲಭ್ಯ, ಹೆಣ್ಣುಮಕ್ಕಳಿಗೆ ಭಾಗ್ಯಲ$್ಮ ಸೇರಿದಂತೆ ಹಲವಾರು ಯೋಜನೆಗಳು ಜಾರಿಗೆ ತಂದಿದ್ದಾರೆ. ಅವರ ಅಭಿಮಾನೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯ ಶಿವರಾಜ ಗಂದಗೆ ಮಾತನಾಡಿ, ಭಾಲ್ಕಿಯಲ್ಲಿ ಜನತೆ ಪರಿವರ್ತನೆ ಬಯಸುತ್ತಿದ್ದಾರೆ. ಬರುವ ದಿನಗಳಲ್ಲಿ ಭಾಲ್ಕಿಯಲ್ಲಿ ಮತ್ತೆ ಬಿಜೆಪಿ ಶಾಸಕರು ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಉಪಾಧ್ಯ ವಿಜಯಕುಮಾರ ಪಾಟೀಲ್​ ಗಾದಗಿ, ಗೋವಿಂದರಾವ ಬಿರಾದಾರ್​, ರೇವಣಸಿದ್ದ ಜಾಡರ್​, ಸುಭಾಷ ಬಿರಾದಾರ್​, ಸಂತೋಷ ಪಾಟೀಲ್​, ಮನ್ಮಥ ಸ್ವಾಮಿ ಇದ್ದರು.
"

ದೇಶಕಂಡ ಅಪ್ರತಿಮ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಜನಪರ ಯೋಜನೆಗಳ ಕೊಡುಗೆ ನೀಡಿದ ಬಿ.ಎಸ್​.ಯಡಿಯುರಪ್ಪ ಅವರು ಜನಸೆವೆಯಲ್ಲಿ 50 ವರ್ಷ ಸಾರ್ಥಕ ಬದುಕು ಮಾದರಿ. ಅವರು ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ಜೀವನ ಸಾಗಿಸಲಿ

— > ಪ್ರಕಾಶ ಖಂಡ್ರೆ ಮಾಜಿ ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net