ಭಾರತೀಯ ಹವಾಮಾನ ಇಲಾಖೆಯು(ಐಎಂಡಿ), ನೈಋತ್ಯ ಮಾನ್ಸೂನ್ ಕುರಿತು ಬಿಡುಗಡೆ ಮಾಡಿರುವ ಮೊದಲ ಹಂತದ ವರದಿಯಲ್ಲಿ ಕರಾವಳಿ,ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ. ಮಳೆ ಅಭಾವದಿಂದಾಗಿ ಈ ಬಾರಿ ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ರೈತಾಪಿ ವರ್ಗ ದಯನೀಯ ಪರಿಸ್ಥಿತಿ ಎದುರಿಸಲಿದೆ.