ಭಕ್ತಿಗೆ ವಯಸ್ಸಿನ ಅಡ್ಡಿ ಇಲ್ಲ

ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಂ.ವೆಂಕಣ್ಣಾಚಾರ್ಯ ಪೂಜಾರ್​ ಭಾಗವತ ಪ್ರವಚನ ನಡೆಸಿಕೊಟ್ಟರು.
ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ಸೋಮವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಂ.ವೆಂಕಣ್ಣಾಚಾರ್ಯ ಪೂಜಾರ್​ ಭಾಗವತ ಪ್ರವಚನ ನಡೆಸಿಕೊಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಮಳಖೇಡದ ಭಾಗವತ ಸಪ್ತಾಹದಲ್ಲಿ ಪಂ.ವೆಂಕಣ್ಣಾಚಾರ್ಯ ಅಭಿಮತ
ಕಲಬುರಗಿ: ಭಕ್ತಿಗೆ ವಯಸ್ಸಿನ ಅಡ್ಡಿ ಇಲ್ಲ ಎಂಬುದನ್ನು ಬಾಲಕ ಧ್ರುವರಾಜ ತೋರಿಸಿಕೊಟ್ಟಿದ್ದಾನೆ ಎಂದು ಪಂ.ವೆಂಕಣ್ಣಾಚಾರ್ಯ ಪೂಜಾರ ಹೇಳಿದರು.
ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿ ವೆಂಕಟೇಶಾಚಾರ್ಯ ಕಡಿವಾಳ ಸೋಮವಾರ ಹಮ್ಮಿಕೊಂಡಿದ್ದ ಭಾಗವತ ಸಪ್ತಾಹದಲ್ಲಿ ಭಾಗವತ ಕುರಿತು ಪ್ರವಚನ ನೀಡಿದ ಅವರು ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದರು.
ಉತ್ಥಾನಪಾದನೆಂಬ ರಾಜನಿದ್ದ, ಆತನಿಗೆ ಸುನಿತಿ, ಸುರಚಿ ಎಂಬಿಬ್ಬರು ಸತಿಯರಿದ್ದರು. ಸುನಿತಿಯ ಮಗನೆ ಧ್ರುವರಾಜ.
ಒಂದು ಬಾರಿ ಸಿಂಹಾಸನದ ಮೇಲೆ ಕುಳಿತಿದ್ದ ಉತ್ಥಾನಪಾದನ ತೊಡೆಯ ಮೇಲೆ ಧ್ರುವರಾಜ ಕುಳಿತಿದ್ದ. ಅದನ್ನು ಕಂಡ ಮಲತಾಯಿ ಸುರಚಿ ಕೋಪದಿಂದ ನಿಂದಿಸಿದಳು. ಚಿಕ್ಕ ಬಾಲಕ ಧ್ರುವ ಅಳುತ್ತ ತನ್ನ ತಾಯಿಯ ಬಳಿಗೆ ಬಂದು ಸುರಚಿ ನಿಂದಿಸಿದ ವಿಷಯ ತಿಳಿಸಿದ. ಭಗವಂತನನ್ನು ಸಾಾತ್ಕಾರ ಮಾಡಿಕೊಂಡು ಬಾ ಎಂದು ತಾಯಿ ಹೇಳುತ್ತಾಳೆ. ಐದು ವರ್ಷದ ಬಾಲಕ ಧ್ರುವರಾಜ ದೇವರನ್ನು ಕಾಣಲು ಕಾಡಿಗೆ ಹೋರಟೆ ಬಿಟ್ಟ.
ಕಾಡಿನಲ್ಲಿ ನಾರದ ಮಹರ್ಷಿಗಳು ಭೇಟಿಯಾಗುತ್ತಾರೆ. ಆಟವಾಡಿಕೊಂಡು ಇರಬೇಕಾದ ಬಾಲಕನಲ್ಲಿರುವ ದೇವರನ್ನು ಕಾಣುವ ತವಕ ಕಂಡು ವಾಸುದೇವ ಮಂತ್ರವನ್ನು ಉಪದೇಶಿಸುತ್ತಾರೆ. ಆರು ತಿಂಗಳವರಗೆ ಕಠಿಣ ತಪಸ್ಸು ಆಚರಿಸಿ ಭಗವಂತನನ್ನು ಸಾಾತ್ಕಾರ ಮಾಡಿಕೊಂಡ. ನತ್ರ ಮಂಡಲದಲ್ಲಿ ಭಗವಂತ ಉನ್ನತ ಸ್ಥಾನ ನೀಡಿದ, ಧ್ರುವ ನತ್ರನಾಗಿ ಇಡಿ ಜಗತ್ತನ್ನು ಬೆಳಗಿಸಿದ ಧ್ರುವರಾಜನ ಭಕ್ತಿ ಎಲ್ಲರಿಗೂ ಮಾದರಿಯಾಗಿದೆ ಎಂದರು.
ದೇವರನ್ನು ಕಂಡು ಅರಮನೆಯತ್ತ ಆಗಮಿಸಿದ ಧ್ರುವ ರಾಜನನ್ನು ಸ್ವಾಗತಿಸಲು ತಂದೆ ಉತ್ಥಾನಪಾದ, ಸುನಿತಿ, ಸುರಚಿ ಆಗಮಿಸಿದ್ದರು. ಧ್ರವರಾಜ ಮೊದಲಿಗೆ ಸುರಚಿಗೆ ನಮಸ್ಕರಿಸಿದ. ಕಾಡಿಗೆ ಕಳಿಸಿದ್ದಾಳೆ ಎಂದು ದ್ವೇಷ ಮಾಡಲಿಲ್ಲ ಧ್ರುವ. ಅವಳ ನಿರ್ಧಾರದಿಂದ ನಾನು ದೇವರನ್ನು ಕಾಣುವಂತಾಯಿತು ಎಂದು ಸುರಚಿಗೆ ಮೊದಲು ನಮಸ್ಕರಿಸಿದ. ತಂದೆಯ ತೋಡೆಯ ಮೇಲೆ ಕುಳಿತುಕೊಳ್ಳಲು ಮಲತಾಯಿ ನಿರಾಕರಿಸಿದಳು. ಆದರೆ ಭಗವಂತ ಜಗತ್ತನ್ನೇ ಬೆಳಗುವ ಉನ್ನತ ಸ್ಥಾನವನ್ನು ಕರುಣಿಸಿದ. ಮನುಷ್ಯನಿಗೆ ಅಸಾಧ್ಯವಾದದು ಯಾವುದೂ ಇಲ್ಲ. ಆದರೆ ಸಾಧಿಸುವ ಛಲವಿರಬೇಕು ಎಂಬುದನ್ನು ಧ್ರುವರಾಜ ತೋರಿಸಿಕೊಟ್ಟಿದ್ದಾನೆ ಎಂದು ಹೇಳಿದರು.
ವೆಂಕಟೇಶಾಚಾರ್ಯ ಕಡಿವಾಳ, ಕಮಲಾಕರ ಕುಲಕರ್ಣಿ, ಅನಂತ ಭಟ್ಟ, ವೆಂಕಟರಾವ ಮುಸರೀಫ್​, ರುನಾಥ ದೇಶಪಾಂಡೆ, ಶ್ರೀಧರ ದೇಸಾಯಿ, ವೆಂಕಟೇಶ ದಂಡೋತಿ, ದೀಪಕ ದಂಡೋತಿ, ರಾವೇಂದ್ರ ಕುಲಕರ್ಣಿ ನರೋಣಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net