ಯಾದಗಿರಿ ನಗರದ ಹಳೇ ಕೋರ್ಟ್ ಎದುರು ನಗರಸಭೆಯಿಂದ ಕೈಗೊಂಡ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅರವಟಿಗೆ ಮತ್ತು ಪಗಳಿಗೆ ಕಾಳಿನ ಮತ್ತು ನೀರಿನ ವ್ಯವಸ್ಥೆಗೆ ಮಂಗಳವಾರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಚಾಲನೆ ನೀಡಿದರು. ಪೌರಾಯುಕ್ತ ಉಮೇಶ ಚವ್ಹಾಣ ಇತರರಿದ್ದರು.
ಯಾದಗಿರಿ: ಬೇಸಿಗೆಯ ಈ ದಿನಗಳಲ್ಲಿ ಸಾರ್ವಜನಿಕರಿಗೆ, ಪಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ಪುಣ್ಯದ ಕಾರ್ಯ.‘ಇದು ಮಳೆ ಆರಂಭವಾಗುವವರೆಗೆ ನಿರಂತರವಾಗಿ ಮುಂದುವರೆಯಲಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು. ನಗರದ ಹಳೇ ಕೋರ್ಟ್ ಮುಂಭಾಗದಲ್ಲಿ ನಗರಸಭೆಯಿಂದ ಕೈಗೊಂಡ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿನ ಅರವಟಿಗೆ ಮತ್ತು ಪಗಳಿಗೆ ಕಾಳಿನ ಮತ್ತು ನೀರಿನ ವ್ಯವಸ್ಥೆಗೆ ಮಂಗಳವಾರ ಚಾಲನೆ ಮಾತನಾಡಿದರು. ಎಲ್ಲ ಜೀವಗಳಿಗೆ ಹೊತ್ತಿಗೆ ಊಟ ಇಲ್ಲ ಎಂದರೂ ನಡೆಯುತ್ತದೆ, ಆದರೆ ಕುಡಿಯುವ ನೀರು ಬೇಕೇಬೇಕು. ಈ ನಿಟ್ಟಿನಲ್ಲಿ ನಗರಸಭೆ ಈ ಕೆಲಸ ಮಾಡಿದ್ದು ಶ್ಲಾಘನೀಯವೆಂದರು.