ವಿದೇಶದಲ್ಲೂ ಪಸರಿಸಿದ ವಿಜ್ಞಾನದ ಕಂಪು

ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಶಿವಬಸವ ಸ್ವಾಮೀಜಿ, ಭಾಲ್ಕಿ ತಾಲೂಕಿನ ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗುರುಮಠಕಲ್​ ಶ್ರೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ ಅವರಿಗೆ ವಿಯೆಟ್ನಾಂ ದೇಶದ ಬನಾಂಗ್​ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಸ್ರೋ ಮಾಜಿ ಅಧ್ಯ ಎ.ಎಸ್​. ಕಿರಣಕುಮಾರ, ನಿವೃತ್ತ ಐಎಎಸ್​ ಅಧಿಕಾರಿ ಡಾ.ಸೋಮಶೇಖರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ ಅಧ್ಯಕ್ಷ ಹುಲಿಕಲ್​ ನಟರಾಜ್​ ಇತರರಿದ್ದರು.
ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಶಿವಬಸವ ಸ್ವಾಮೀಜಿ, ಭಾಲ್ಕಿ ತಾಲೂಕಿನ ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಗುರುಮಠಕಲ್​ ಶ್ರೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ ಅವರಿಗೆ ವಿಯೆಟ್ನಾಂ ದೇಶದ ಬನಾಂಗ್​ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇಸ್ರೋ ಮಾಜಿ ಅಧ್ಯ ಎ.ಎಸ್​. ಕಿರಣಕುಮಾರ, ನಿವೃತ್ತ ಐಎಎಸ್​ ಅಧಿಕಾರಿ ಡಾ.ಸೋಮಶೇಖರ, ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ ಅಧ್ಯಕ್ಷ ಹುಲಿಕಲ್​ ನಟರಾಜ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ ಪರಿಷತ್​ ಕಾರ್ಯಕ್ಕೆ ಡಾ.ರಾಜಾಸಾಬ್​ ಮೆಚ್ಚುಗೆ
  • ವಿಯೆಟ್ನಾಂನಲ್ಲಿ ಕರ್ನಾಟಕದ ಶ್ರೀಗಳಿಗೆ ಪ್ರಶಸ್ತಿ ಪ್ರದಾನ
ಹುಲಸೂರು: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್​ ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ತನ್ನ ವೈಜ್ಞಾನಿಕ ಚಟುವಟಿಕೆಗಳನ್ನು ವಿದೇಶಗಳಿಗೂ ವಿಸ್ತರಿಸಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಾಜ್ಞಾನ ಅಕಾಡೆಮಿ ಅಧ್ಯಕ್ಷ ಡಾ.ಎ.ಎಚ್​. ರಾಜಾಸಾಬ್​ ಹೇಳಿದರು.
ವಿಯೆಟ್ನಾಂ ದೇಶದ ಬನಾಂಗ್​ನಲ್ಲಿ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್​ ಶುಕ್ರವಾರ ಆಯೋಜಿಸಿದ್ದ ಇಂಡೋ ನಾಮ್​ ಸೈಂಟಿಫಿಕ್​ ಸಮಿಟ್​ ಫೆಲೋಶಿಪ್​-2026ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ವೈಜ್ಞಾನಿಕ ಸಮ್ಮೇಳನ ವಿಯೆಟ್ನಾಂ ಮತ್ತು ಭಾರತದ ನಡುವೆ ವೈಜ್ಞಾನಿಕ ವಿನಿಮಯ ಕಾರ್ಯಕ್ರಮಗಳಿಗೆ ಪೂರಕವಾಗಿದೆ ಎಂದರು.
ಕರ್ನಾಟಕ ವೈಜ್ಞಾನಿಕ ಮನೋಭಾವ ಮೂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದು, ಮೂಢನಂಬಿಕೆಗಳ ನಿವಾರಣೆಗೆ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ಪ್ರತಿಯೊಬ್ಬ ಪ್ರಜೆ ವೈಚಾರಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಪ್ರಯೋಗಾತ್ಮಕ ಗುಣ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.
ಪರಿಷತ್​ ಅಧ್ಯ ಹುಲಿಕಲ್​ ನಟರಾಜ್​ ಮಾತನಾಡಿ, ಇಂಡೋ ನಾಮ್​ ಸೈಂಟಿಫಿಕ್​ ಸಮಿಟ್​ ಫೆಲೋಶಿಪ್​-2026ರ ಮೂಲಕ ಪರಿಷತ್ತು ಸಾಗರೋತ್ತರಕ್ಕೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿದೆ. ಈ ಫೆಲೋಶಿಪ್​ ವಿಜ್ಞಾನ ಪ್ರಸರಣಕ್ಕೆ ಶ್ರಮಿಸಿದ ಗಣ್ಯರಿಗೆ ಪ್ರದಾನ ಮಾಡಲಾಗುತ್ತಿದೆ. ವಿಯೆಟ್ನಾಂ ಮತ್ತು ಭಾರತದ ಸಹಯೋಗದಡಿ ನಡೆಯುತ್ತಿರುವ ಮೊದಲ ವೈಜ್ಞಾನಿಕ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಇಂದು ನಮ್ಮ ಸಮಾಜ ಕೇವಲ ತಂತ್ರಾಜ್ಞಾನ ಬಳಕೆಯಲ್ಲಿ ಮುಳುಗಿದೆಯೇ ಹೊರತು ನಿಜವಾದ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಹಿಂದುಳಿದಿದೆ. ಕೇವಲ ಮೊಬೈಲ್​, ಕಂಪ್ಯೂಟರ್​ ಬಳಸಿದ ತಕ್ಷಣ ಯಾರೂ ವೈಜ್ಞಾ ನಿಕರಾಗುವುದಿಲ್ಲ. ನಮ್ಮ ಸುತ್ತಮುತ್ತಲಿನ ಮೂಢನಂಬಿಕೆ, ಕಂದಾಚಾರ ಮತ್ತು ಅವೈಜ್ಞಾನಿಕ ಆಚರಣೆಗಳನ್ನು ಪ್ರಶ್ನಿಸುವ ಮನಸ್ಸು ಬೆಳೆದಾಗಲೇ ನಾವು ಪ್ರಗತಿ ಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.
ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್​. ಕಿರಣಕುಮಾರ ಮಾತನಾಡಿದರು. ನಿವೃತ್ತ ಐಎಎಸ್​ ಅಧಿಕಾರಿ ಡಾ.ಸೋಮಶೇಖರ, ಡಿಸ್ಟ್ರಿಕ್ಟ್​ ಗೌರ್ನರ್​ ಲಯನ್​ ರಾಜು ಚಂದ್ರಶೇಖರ, ಪ್ರಮುಖರಾದ ದಿನೇಶಕುಮಾರ ಜೈನ್​, ಗುಂಡಪ್ಪ ಕಲಬುರಗಿ, ಎಸ್​.ಎಂ. ಸುರೇಶ್​, ವಿಶ್ವಾರಾಧ್ಯ ಸತ್ಯಂಪೇಟೆ, ಅಜೀಜ್​ ಅಹ್ಮದ್​ ಇತರರಿದ್ದರು.
ಮೂವರು ಮಠಾಧೀಶರಿಗೆ ಫೆಲೋಶಿಪ್​
ಕಾರ್ಯಕ್ರಮದಲ್ಲಿ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಶಿವಬಸವ ಸ್ವಾಮೀಜಿ, ಭಾಲ್ಕಿ ತಾಲೂಕಿನ ಸಾಯಿಗಾಂವದ ಶ್ರೀ ಶಿವಾನಂದ ಸ್ವಾಮೀಜಿ, ಯಾದಗಿರಿ ಜಿಲ್ಲೆ ಗುರುಮಠಕಲ್​ ಶ್ರೀ ಶಾಂತವೀರ ಮುರುರಾಜೇಂದ್ರ ಸ್ವಾಮೀಜಿ ಅವರಿಗೆ ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್​ನಿಂದ ಇಂಡೋ ನಾಮ್​ ಸೈಂಟಿಫಿಕ್​ ಸಮಿಟ್​ ಫೆಲೋಶಿಪ್​ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net