ರಾಜ್ಯಕ್ಕೆ ನೀಟ್​ ನಿರ್ವಹಣೆ ಹೊಣೆ

ಡಾ.ಶರಣಪ್ರಕಾಶ ಪಾಟೀಲ್​ ವೈದ್ಯಕಿಯ ಶಿಕ್ಷಣ ಸಚಿವ
ಡಾ.ಶರಣಪ್ರಕಾಶ ಪಾಟೀಲ್​ ವೈದ್ಯಕಿಯ ಶಿಕ್ಷಣ ಸಚಿವ
Published on

ಪ್ರಮುಖ ಮುಖ್ಯಾಂಶಗಳು

  • ಉಭಯ ಸದನಗಳಲ್ಲಿ ನಿರ್ಣಯ
  • ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿಕೆ
ಕಲಬುರಗಿ: ಅನೇಕ ವರ್ಷಗಳಿಂದ ನೀಟ್​ ಪರೀಕ್ಷೆಯಲ್ಲಿ ಅನೇಕ ಗೊಂದಲ ಕಾಣಿಸುದ್ದು, ಕೇಂದ್ರ ಸರ್ಕಾರಕ್ಕೆ ಅಚ್ಚುಕಟ್ಟಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರೀಕ್ಷೆ ನಡೆಸಲು ಆಯಾ ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಉಭಯ ಸದನಗಳಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಕರ್ನಾಟಕ ಜತೆ ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳ ಸೇರಿ ದಕ್ಷಿಣ ರಾಜ್ಯಗಳು ರ್ನಿಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿವೆ. ನೀಟ್​ ಪರೀಕ್ಷೆ, ಫಲಿತಾಂಶ ಪ್ರಕಟ, ಕೌನ್ಸೆಲಿಂಗ್​ ಹೀಗೆ ಎಲ್ಲ ಹಂತ ನಿರ್ವಹಿಸುವ ಹೊಣೆ ಆಯಾ ರಾಜ್ಯಗಳಿಗೆ ನೀಡಬೇಕು. ಆಗಲೇ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಸುಸೂತ್ರ ಪೂರ್ಣಗೊಳಿಸಲು ಸಾಧ್ಯವಾಗಲಿದೆ ಎಂದು ಅವರು ಶುಕ್ರವಾರ ಭೇಟಿಯಾದ ಸುದ್ದಿಗಾರರಿಗೆ ತಿಳಿಸಿದರು.
ಈ ಬಾರಿ 550 ವೈದ್ಯಕಿಯ ಯುಜಿ ಮತ್ತು 578 ಪಿಜಿ ಸೀಟ್​ ಹೆಚ್ಚಳಕ್ಕೆ ನ್ಯಾಷನಲ್​ ಮೆಡಿಕಲ್​ ಕೌನ್ಸಿಲ್​ ಸಮ್ಮತಿ ಸೂಚಿಸಿದೆ. ಬಾಗಲಕೋಟೆ, ರಾಮನಗರದಲ್ಲಿ ಹೊಸ ಮೆಡಿಕಲ್​ ಕಾಲೇಜು ಸ್ಥಾಪಿಸುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಪ್ರಾರಂಭಿಸುವ ಉದ್ದೇಶವಿದೆ. ಆದರೆ ಎನ್​ಎಂಸಿ ನಿಗದಿತ ಅವಧಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಿದಲ್ಲಿ ಅನುಕೂಲವಾಗಲಿದೆ ಎಂದರು.
ಈ ವರ್ಷವೂ ವೈದ್ಯಕಿಯ ಕೋರ್ಸ್​ಗಳ ಶುಲ್ಕದಲ್ಲಿ ಹೆಚ್ಚಳ ಮಾಡಿಲ್ಲ. ಕಲಬುರಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕೆಲಸ ಪ್ರಗತಿಯಲ್ಲಿದ್ದು, ಒಂಬತ್ತು ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಏಜೆನ್ಸಿ ಹೇಳಿದೆ. 200 ಹಾಸಿಗೆಯ ಕ್ಯಾನ್ಸರ್​ ಆಸ್ಪತ್ರೆ ಕಟ್ಟಡ ಆರು ತಿಂಗಳಲ್ಲಿ ನಿರ್ಮಾಣಗೊಳ್ಳಲಿದೆ. ಕ್ರಿಟಿಕಲ್​ ಕೇರ್​ ಆಸ್ಪತ್ರೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ ಯಾದಗಿರಿ ಮತ್ತು ಕಾರವಾರದಲ್ಲಿ ಸೂಪರ್​ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಚಿವ ಸಂಪುಟದ ಅನುಮತಿ ದೊರೆತಿದೆ. ಅತಿ ಶ್ರೀ ಟೆಂಡರ್​ ಕರೆಯಲಾಗುವುದು. ರ್ಬನ್​ ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಇಂದಿರಾಗಾಂಧಿ ಚೈಲ್ಡ್​ ಕೇರ್​ ಇನ್​ಸ್ಟಿಟ್ಯೂಟ್​, ಡಯಾಬಿಟಾಲಜಿ ಕೇಂದ್ರ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿವೆ ಎಂದರು.
"

ನೀಟ್​ 2ನೇ ಸಲ ಪರೀಕ್ಷೆ ಆಗಿದ್ದು, ತಕ್ಷಣ ಫಲಿತಾಂಶ ಪ್ರಕಟಿಸಿ ಕೌನ್ಸೆಲಿಂಗ್​ ಪ್ರಕ್ರಿಯೆ ಪೂರ್ಣಗೊಳಿಸಬೇಕು. ವಿಳಂಬವಾದರೆ ವಿದ್ಯಾರ್ಥಿಗಳಿಗೂ ತೊಂದರೆ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರ ಪರಿಗಣಿಸಿ ಆದ್ಯತೆ ಮೇರೆಗೆ ಈ ಕಾರ್ಯ ಚುರುಕುಗೊಳಸಬೇಕು.

— > ಡಾ.ಶರಣಪ್ರಕಾಶ ಪಾಟೀಲ್​ ವೈದ್ಯಕಿಯ ಶಿಕ್ಷಣ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net