ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮೂಲ ಆಧಾರ

ಬೆಡಸೂರ ಗ್ರಾಮದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಅಕ್ಷತಾ, ಮಹಾದೇವಿ ಅವರನ್ನು ಸನ್ಮಾನಿಸಲಾಯಿತು. ಗುರಶಾಂತಯ್ಯ ಹಿರೇಮಠ, ಶ್ರೀಧರ ಅಸಂಗಿಹಾಳ, ಮಲ್ಲಪ್ಪ ಕುರಿ, ಬಸಪ್ಪ ಮಲ್ಲಾಡ ಇತರರಿದ್ದರು.
ಬೆಡಸೂರ ಗ್ರಾಮದಲ್ಲಿ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಅಕ್ಷತಾ, ಮಹಾದೇವಿ ಅವರನ್ನು ಸನ್ಮಾನಿಸಲಾಯಿತು. ಗುರಶಾಂತಯ್ಯ ಹಿರೇಮಠ, ಶ್ರೀಧರ ಅಸಂಗಿಹಾಳ, ಮಲ್ಲಪ್ಪ ಕುರಿ, ಬಸಪ್ಪ ಮಲ್ಲಾಡ ಇತರರಿದ್ದರು.
Published on
ಸವದತ್ತಿ: ಶಿಣ ಪ್ರತಿಯೊಬ್ಬ ವಿದ್ಯಾರ್ಥಿಯ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಮೂಲ ಆಧಾರವಾಗಿದ್ದು, ಗ್ರಾಮೀಣ ಭಾಗದ ಮಕ್ಕಳು ಸರ್ಕಾರದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಗುರಶಾಂತಯ್ಯ ಹಿರೇಮಠ ಹೇಳಿದರು.
ತಾಲೂಕಿನ ಬೆಟಸೂರ ಗ್ರಾಮದ ಪಂಚಾರಿ ಮಠದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಎಸ್​ಎಸ್​ಎಲ್​ಸಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು.
ಪಿಎಂಶ್ರೀ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಅತಾ ಅಪ್ಪೋಜಿ 574 ಅಂಕ ಪಡೆದು ಶಾಲೆಗೆ ದ್ವೀತಿಯ ಸ್ಥಾನ ಹಾಗೂ ಮಹಾದೇವಿ ನರಗುಂದ 568 ಅಂಕ ಪಡೆದು ತೃತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು. ಶ್ರೀಧರ ಅಸಂಗಿಹಾಳ, ಗ್ರಾಮ ಪಂಚಾಯಿತಿ ಸದಸ್ಯ ಮಲ್ಲಪ್ಪ ಕುರಿ, ಬಸಪ್ಪ ಮಲ್ಲಾಡ, ಈಶ್ವರಪ್ಪ ತಂಗಾಯಿ, ವಿರೂಪಾಪ್ಪ ತಲ್ಲೂರ, ಶಂಕ್ರಪ್ಪ ಹೆಬ್ಬಳ್ಳಿ, ಸೋಮಲಿಂಗಪ್ಪ ಧಾರವಾಡ, ಕೆಂಚಪ್ಪ ಅಪ್ಪೊಜಿ, ಗೌರವ್ವ ಮೊಕಾಶಿ, ಆಶಾ ಕಾರ್ಯಕರ್ತೆ ಸುಮಿತ್ರಾ ಚಿಕ್ಕುಂಬಿ, ಯೋಗ ಶಿಕ ಸದಾನಂದ ಕುರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net