ಅಧಿಕಮಾಸ ಅತ್ಯಂತ ಶ್ರೇಷ್ಠ ಮಾಸ

 ಶಹಾಪುರನ ಕಾಳಿಕಾ ದೇವಸ್ಥಾನದಲ್ಲಿ ಅಧಿಕ ಮಾಸದ ಮಹಾ ಮಂಗಲದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಹಾಪುರನ ಕಾಳಿಕಾ ದೇವಸ್ಥಾನದಲ್ಲಿ ಅಧಿಕ ಮಾಸದ ಮಹಾ ಮಂಗಲದ ನಿಮಿತ್ತ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾಳಹಸ್ತೇಂದ್ರ ಸ್ವಾಮೀಜಿ ಹೇಳಿಕೆ
  • ಕಾಳಿಕಾ ದೇವಸ್ಥಾನದಲ್ಲಿ ಮಹಾಮಂಗಲ
ಶಹಾಪುರ: ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕಮಾಸವೂ ಅತ್ಯಂತ ಶ್ರೇಷ್ಠ ಮಾಸವಾಗಿದೆ ಎಂದು ಶ್ರೀ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ತಿಳಿಸಿದರು.
ನಗರದ ಗಾಂಧೀ ಚೌಕ್​ ಸಮೀಪದ ಕಾಳಿಕಾ ದೇವಸ್ಥಾನದಲ್ಲಿ ಭಾನುವಾರ ಆಯೋಜಿಸಿದ್ದ ಅಧಿಕ ಮಾಸದ ಮಹಾಮಂಗಲ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶಿರ್ವಚನ ನೀಡಿದ ಅವರು, ಅಧಿಕ ಮಾಸದಲ್ಲಿ ಮದುವೆ, ಉಪನಯನ, ಗೃಹಪ್ರವೇಶ, ಶುಭ ಸಮಾರಂಭಗಳಿಗೆ ಆದ್ಯತೆ ಇರುವುದಿಲ್ಲ. ಕೇವಲ ದೇವರು ಮತ್ತು ಗುರುಗಳ ಸ್ಮರಣೆಗೆ, ದೇವರ ನಾಮ ಸ್ಮರಣೆಗೆ, ಜಪ, ತಪಕ್ಕೆ ಇದು ಅತ್ಯಂತ ಶ್ರೇಷ್ಠವಾದ ಮಾಸವಾಗಿದೆ ಎಂದರು.
ಇನ್ನು ಈ ಮಾಸದಲ್ಲಿ ಅನೇಕ ತೀರ್ಥ ಯಾತ್ರೆ, ಪುಣ್ಯ ೇತ್ರಗಳ ದರ್ಶನ ಪಡೆಯುವುದರ ಮೂಲಕ ಮನುಷ್ಯನು ತನ್ನ ಪಾಪ ಕರ್ಮಾದಿ ದೂರ ಮಾಡಿಕೊಳ್ಳಬಹುದು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಮಹಿಳಾ ಬಳಗದ ವತಿಯಿಂದ ಅಧಿಕ ಮಾಸದ ಸಂಪೂರ್ಣ ಒಂದು ತಿಂಗಳ ಪರ್ಯಂತ ದಿನ ನಿತ್ಯ 33 ಭಕ್ತಿ ಗೀತೆಗಳ ಭಜನೆ, ದೇವರ ನಾಮ ಸ್ಮರಣೆ ಮಾಡಿಕೊಂಡು ಬರಲಾಯಿತು.
ಭಾನುವಾರ ಕಾಳಿಕಾ ದೇವಸ್ಥಾನದಲ್ಲಿ ಅಧಿಕಮಾಸದ ಮಹಾಮಂಗಲದ ನಿಮಿತ್ತ ಸುಮಾರು 200 ಜನ ಮುತೆದೆಯರಿಗೆ ಪೂಜೆ, ಉಡಿತುಂಬುವ ಕಾರ್ಯಕ್ರಮ ಹಾಗೂ ಮಹಾ ಪ್ರಸಾದ ಸಮರ್ಪಣೆ ಜರುಗಿತು. ಕಾರ್ಯಕ್ರಮದಲ್ಲಿ ಸಂಗೀತ ಸೇವೆಗೈದ ಕಲಾವಿದರಾದ ಸಂತೋಷ ಪತ್ತಾರ, ಚಂದ್ರು ಕಲ್ಬುರ್ಗಿ, ಈರಣ್ಣ ವಿಶ್ವಕರ್ಮ ಆಂದೋಲ, ಮಲ್ಲಿಕಾರ್ಜುನ ಕೊಡಮನಹಳ್ಳಿ, ವಿಶ್ವನಾಥ ಕನ್ಯಾಕೊಳೂರು ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಹಿಳಾ ಸಂದ ಅಧ್ಯೆ ಶೈಲಾ ಆರ್​.ಪತ್ತಾರ, ಚಂದ್ರಕಲಾ ಎಸ್​.ಪತ್ತಾರ, ಸಿರಸಮ್ಮ ಆಂದೋಲ, ಸುಜಾತ ಪತ್ತಾರ, ಜಮುನ ಆರ್​. ಪತ್ತಾರ, ಹಿರಿಯರಾದ ಲ್ಮಣ ಕಂಬಾರ, ದೇವಿಂದ್ರಪ್ಪ ಎಲ್​. ವಡಗೇರಿ, ಪ್ರಮುಖರಾದ ದೇವಿಂದ್ರಪ್ಪ ಕನ್ಯಾಕೋಳೂರ, ಬಸವರಾಜ ಬೊಮ್ಮನಳ್ಳಿ, ರವೀಂದ್ರನಾಥ ಶಹಾಬಾದ, ಅಶೋಕ ಕುಳಗೇರಿ, ರಮೇಶ ದೋರನಹಳ್ಳಿ, ಮಾನಪ್ಪ ವಿಭೂತಿಹಳ್ಳಿ, ಮಲ್ಲಯ್ಯ ರಂಗಂಪೇಠ, ಶ್ರೀಧರ ರಂಗಂಪೇಠ, ಸೋಮಶೇಖರ ಪ್ರತಿಹಸ್ತ, ಜನ್ನಪ್ಪ ಪತ್ತಾರ, ಸಂತೋಷ ವಿಶ್ವಕರ್ಮ ನಗನೂರ, ಸುಭಾಷ ನಾಲವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net