ಕಾನೂನಿಗೆ ಗೌರವ ನೀಡಿ ತಾವು ಈಗಾಗಲೇ ತಮಗೆ ವಿಧಿಸಿದ್ದ 6080 ರೂ.ದಂಡ ಕಟ್ಟಿದ್ದಾಗಿ ತಿಳಿಸಿದ ಅಶೋಕ, ತಾವು ಇದುವರೆಗೂ ನೀಡಿದ ಯಾವುದೇ ಅರ್ಜಿ ವಾಪಸ್ ಪಡೆದಿಲ್ಲ, ಇದು ಬಹಿರಂಗ ತನಿಖೆಯಾಗಲಿ ಎಂದಿದ್ದಾರೆ. ತಾವೊಬ್ಬ ಅಂಗವಿಕಲ ವ್ಯಕ್ತಿಯಾಗಿದ್ದು, ಕಳೆದ 14 ತಿಂಗಳಿಂದ ಜಿಪಂ ಕಚೇರಿಗೆ ನೂರಾರ ಸಲ ಅಲೆದರೂ ನ್ಯಾಯ ಸಿಕ್ಕಿಲ್ಲ, ಬದಲಿಗೆ ಮಾನಸಿಕ ಮತ್ತು ದೈಹಿಕವಾಗಿ ಸಾಕಷ್ಟು ತೊಂದರೆಯಾಗಿದೆ. ಇದಕ್ಕೆ ಯಾರು ಹೊಣೆ ?, ನನಗಾದ ಅನ್ಯಾಯಕ್ಕೆ ದಂಡ ಕಟ್ಟವವರ್ಯಾರು?. ಇದು ಇಷ್ಟಕ್ಕೆ ಬಿಡುವುದಿಲ್ಲ, ಮಾಜಿ ಸಚಿವ ವರ್ತೂರ ಪ್ರಕಾಶ ಅವರ ನೇತೃತ್ವದಲ್ಲಿ ಜಿಪಂ ಕಚೇರಿ ಬಳಿ ಪ್ರತಿಭಟನೆ ನಡೆಸುವುದಾಗಿ ಅಶೋಕ ಎಚ್ಚರಿಸಿದ್ದಾರೆ.